ವಾಗ್ದಾನ ದೇಶದ ದೃಶ್ಯಗಳು
ತಾಬೋರ್ನಿಂದ ಹೊರಟು ವಿಜಯಕ್ಕೆ!
ಒಂದು ಬುರುಜಿನ ಮೇಲೆ ನಿಂತು, ಇತಿಹಾಸದ ಪಥಗಳು ಅಡಹ್ಡಾಯ್ದ ಸ್ಥಳವೊಂದರ ಕಡೆಗೆ ನೋಡುವುದನ್ನು ಊಹಿಸಿರಿ! ಇತಿಹಾಸವೊಂದು ರಚಿಸಲ್ಪಡುತ್ತಿರುವುದನ್ನು ನೀವಲ್ಲಿ ಕಾರ್ಯಥ ಕಾಣಬಲ್ಲಿರಿ.
ಆ ವರ್ಣನೆಯನ್ನು ಬೈಬಲಿನ ಮೆಗಿದ್ದೋ ನೆಲೆಯು ಉತ್ತಮವಾಗಿ ಒಪ್ಪಬಹುದು ಯಾಕಂದರೆ, ಅದು ವ್ಯಾಪಾರ ಮತ್ತು ಮಿಲಿಟರಿ ಪ್ರಧಾನವಾದ ಪಥಗಳ ನಡುವೆ ಕುಳಿತಿದೆ. ಆದರೂ, ಇಜ್ರೇಲಿನ ತಗ್ಗಿನ ಆಚೇಕಡೆ ತಾಬೋರ್ ಬೆಟ್ಟವು ಮೇಲೇರಿ ನಿಂತದೆ, ಅದು ಫರ್ಟೈಲ್ ಕ್ರಿಸ್ಸೆಂಟ್ ಪಟ್ಟಣಗಳ ಪ್ರಖ್ಯಾತ ಮಾರ್ಗವಾದ ವಯಾ ಮೆರೀಸ್ನ್ನೂ ಮೇಲಿಂದ ನೋಡುತ್ತದೆ.a
ಆ ಪ್ರದೇಶದ ಎತ್ತಕಡೆಯಿಂದಲೇ ನೀವು ತಾಬೋರನ್ನು ನೋಡಿರಿ, ಅದು ನಿಮ್ಮನ್ನು ಪ್ರಭಾವಿಸದಿರಲು ಸಾಧ್ಯವಿಲ್ಲ. (ಯೆರೆಮೀಯ 46:18 ಹೋಲಿಸಿ.) ತಾಬೋರ್ ತನ್ನ ಸುತ್ತಮುತ್ತಲಿನ ಭವ್ಯ ಏಕಾಂತತೆಯ ನಡುವೆ ಉನ್ನತವಾಗಿ ನಿಂತಿದ್ದು, ಅದರ ಶಂಕುವಿನಾಕಾರವು ಎಲ್ಲಾ ದಿಕ್ಕುಗಳಿಂದ ದೃಶ್ಯಗೋಚರವಾಗಿದೆ. ತನ್ನ ಮುಂದೆ ದಕ್ಷಿಣಕ್ಕೆ ಚಾಚಿರುವ ಮತ್ತು ಯೋರ್ದಾನ್ ಕಣಿವೆಯನ್ನು ಕರಾವಳಿಗೆ ಜೋಡಿಸುವ, ಫಲವತ್ತಾದ ಇಜ್ರೇಲ್ ತಗ್ಗಿನ ಬಯಲು ಪ್ರದೇಶದ ಮೇಲೆ, ಅದು ಗೋಪುರದಂತೆ ನಿಂತಿದೆ.
ನುಣುಪಾದ ದುಂಡಗಿನ ತಾಬೋರ್ ಶಿಖರದಿಂದ ದಕ್ಷಿಣಕ್ಕೆ, ನೀವು ಇಜ್ರೇಲ್ ಶಹರದ ಕಡೆಗೆ ನೋಡಬಹುದು, ಅದು ಆಹಾಬನ ಅರಮನೆಗೆ ಯೇಹುವಿನ ವೇಗದ ರಥ ಸವಾರಿಯನ್ನೂ ಮತ್ತು ಇಜಬೇಲಳ ಅಪಮಾನಕರ ಅಂತ್ಯವನ್ನೂ ನಿಮ್ಮ ನೆನಪಿಗೆ ತರಬಹುದು. (1 ಅರಸು 21:1; 2 ಅರಸು 9:16-33) ಸಮೀಪದಲ್ಲೀ ಮೆಗಿದ್ದೋ ಇದೆ. ಪಶ್ಚಿಮಕಡೆ ಕಾರ್ಮೆಲ್ ಬೆಟ್ಟವನ್ನು ನೀವು ನೋಡಬಹುದು, ಎಲೀಯನು ಅಗ್ನಿ ಪರೀಕ್ಷೆಯನ್ನು ನಡಿಸಿದ್ದು ಇಲ್ಲಿಯೇ. (1 ಅರಸುಗಳು 18ನೇ ಅಧ್ಯಾಯ) ಕಿಷೋನ್ ಹೊಳೆಯು ಸಮುದ್ರದೆಡೆ ಹರಿಯುವದನ್ನೂ ನೀವು ತಾಬೋರ್ನಿಂದ ನೋಡಬಹುದು, ಇಲ್ಲಿಂದ ಐದು ಮೈಲುಗಳ ಅಂತರದಲ್ಲಿ ಪಡುವಲಿಗೂ ವಾಯುವ್ಯಕ್ಕೂ ನಡುವೆ ಗಲಿಲಾಯದ ಗುಡ್ಡಗಳ ತಳದಲ್ಲಿ ನಜರೇತು ಇದೆ.
ಆದರೆ, ತಾಬೋರ್ ಬೈಬಲಿನ ಯಾವ ವೃತ್ತಾಂತವನ್ನು ನಿಮ್ಮ ನೆನಪಿಗೆ ತರುತ್ತದೆ? ದೆಬೋರ ಮತ್ತು ಬಾರಾಕನ ವೃತ್ತಾಂತವನ್ನೇ. ಅವರ ಸಮಯದಲ್ಲಿ ಹಾಚೋರಿನ ರಾಜ ಯಾಬೀನನ ಕೈಕೆಳಗೆ ಕಾನಾನ್ಯರು ಇಸ್ರಾಯೇಲ್ಯರನ್ನು 20 ವರ್ಷಗಳಿಂದ ಬಾಧಿಸುತ್ತಿದ್ದರು. ಆಗ ಪ್ರವಾದಿನಿಯಾದ ದೆಬೋರಳು ಬಾರಾಕನನ್ನು ಕ್ರಿಯೆಗೈಯಲು ಹುರಿದುಂಬಿಸಿದಳು. ಪ್ರತಿಯಾಗಿ ಬಾರಾಕನು ಗಲಿಲಾಯದಲ್ಲಿ, ಮುಖ್ಯವಾಗಿ ನೆಪ್ತಾಲಿ ಮತ್ತು ಇಸ್ಸಕಾರನ ಕುಲದ ಹತ್ತು ಸಾವಿರಮಂದಿಯನ್ನು ಹುರಿದುಂಬಿಸಿದನು ಮತ್ತು ಅವರನ್ನು ತಾಬೋರ್ ಬೆಟ್ಟದಲ್ಲಿ ಒಟ್ಟುಸೇರಿಸಿದನು. ಅವರಲ್ಲಿ ಬಡಕಲಾದ ಶಸ್ತ್ರಸಂಚಯವಿತ್ತು, ಇಸ್ರೇಲಿನಲ್ಲಿ ಒಂದಾದರೂ ಗುರಾಣಿ ಯಾ ಬರ್ಜಿ ಇದ್ದಿರಲಿಲ್ಲ.—ನ್ಯಾಯಸ್ಥಾಪಕರು 5:7-17.
ಬಹು ಬಲಾಢ್ಯ ಮಿಲಿಟರಿ ಶಕ್ತಿಯು ಅವರ ವಿರುದ್ಧವಾಗಿ ಎದ್ದುಬಂತು. ಯಾಬೀನನ ಸೇನಾಪತಿ ಸೀಸೆರನು ಶಸ್ತ್ರ ಸನ್ನದ್ಧ ಕಾನಾನ್ಯ ಕಾದಾಳುಗಳನ್ನು ಇಜ್ರೇಲ್ ತಗ್ಗಿಗೆ ಕರೆತಂದನು. ಮುಂದಿನ ಪುಟದಲ್ಲಿರುವ ಇಜಿಪ್ತಿನ ಗೋಡೆಕೆತ್ತನೆಯಲ್ಲಿ ತೋರಿಸಲಾದ ಶಸ್ತ್ರಸನ್ನದ್ಧ ಪುರುಷರಂತೆ ಅವರು ಕಂಡಿದಿರ್ದಬಹುದು. ಇಜಿಪ್ತಿನ ಯುದ್ಧೋಪಕರಣದ ಪ್ರಭಾವವು ಕಾನಾನ್ಯರ ಮೇಲಿತ್ತು, ಸೀಸೆರನ ಶಸ್ತ್ರಗಳ ಅತಿ ಭೀಕರ ಭಾಗವು—900 ಯುದ್ಧ ರಥಗಳು ಅದರಲ್ಲಿ ಕೂಡಿದ್ದವು!
ಆ ಕಾನಾನ್ಯ ರಥಗಳು ಕಾರ್ಯಥಃ ಗುಂಡು ಹಾರಿಸಲು ಸಜ್ಜಿತವಾದ ತುಪಾಕಿಗಳು. ಶಸ್ತ್ರಪ್ರಯೋಗಕ್ಕೆ ತನ್ನ ಕೈಗಳನ್ನು ಮುಕ್ತವಾಗಿ ಇರಿಸಲು ಸಾರಥಿಯು ಲಗಾಮನ್ನು ಸೊಂಟಕ್ಕೆ ಸುತ್ತಿದ್ದಿರಬೇಕು. ಅಥವಾ ತನ್ನ ಸಂಗಡಿಗನು ಶಸ್ತ್ರಹಾರಿಸುವಾಗ ಅವನು ರಥ ಓಡಿಸುವುದರಲ್ಲಿ ಮಗ್ನನಾಗಿ ಇದ್ದಿರಬೇಕು. ರಥಗಳ ಚಕ್ರದ ನಾಭಿಯಿಂದ ಕಬ್ಬಿಣದ ಕುಡು ಗೋಲುಗಳು ಚಾಚಿದ್ದವು. ಈ ರಥ ಸಮೂಹವು, ಬಾರಾಕನ ಸೈನಿಕರು ತಾಬೋರ್ನಿಂದ ಕೆಳಗೆ ನೋಡುವಾಗ ಎದುರಿಸಲಾಗದ, ಅಬೇಧ್ಯವಾದ ಭೀಕರ ಸೇನೆಯಾಗಿ ಕಂಡಿತ್ತು.
ಆದರೂ ಯೆಹೋವನು ಬಾರಾಕನಿಗೆ ವಚನಕೊಟ್ಟದ್ದು: “ನಾನು ಸೀಸೆರನನ್ನೂ ಅವನ ಸೈನ್ಯ ರಥಗಳನ್ನೂ . . . ನಿನ್ನ ಬಳಿಗೆ ಕಿಷೋನ್ ಹಳ್ಳಕ್ಕೆ ಎಳೆದುಕೊಂಡು ಬಂದು ನಿನ್ನ ಕೈಗೆ ಒಪ್ಪಿಸುವೆನು.” ತಕ್ಕ ಸಮಯದಲ್ಲಿ, ತಾಬೋರ್ ಬೆಟ್ಟದಿಂದ ಯುದ್ಧಶೂರ ಇಸ್ರಾಯೇಲ್ಯರು ಇಳಿದುಬಂದರು.
ಇಸ್ರಾಯೇಲ್ಯರಿಗೆ ಕೇವಲ ಅಚ್ಚರಿಯ ಅನುಕೂಲತೆಗಿಂತ ಪರಲೋಕದ ತಮ್ಮ ಸರ್ವಶಕ್ತ ದೇವರಿಂದ ದೊರೆತ ಸಹಾಯವು ಹೆಚ್ಚು ಮೂಲ್ಯವಾಗಿ ಇತ್ತು. ದೆಬೋರಳು ಅನಂತರ ಹಾಡಿದ್ದು: “ನಕ್ಷತ್ರಗಳು ಆಕಾಶಪಥದಲ್ಲಿ ಇದ್ದು ಸೀಸೆರನೊಡನೆ ಯುದ್ಧ ಮಾಡಿದವು. ಕಿಷೋನ್ ಹೊಳೆಯು ಶತ್ರುಗಳನ್ನು ಬಡಕೊಂಡು ಹೋಯಿತು . . . ನನ್ನ ಮನವೇ ಧೈರ್ಯದಿಂದ ಮುಂದೆ ಹೊರಡು.” (ನ್ಯಾಯಸ್ಥಾಪಕರು 5:20, 21) ಹೌದು, ಕೊಂಚ ಶಸ್ತ್ರಗಳಿದ್ದರೂ, ಯುದ್ಧವೀರ ಇಸ್ರಾಯೇಲ್ಯ ಸೈನಿಕರು ಶಸ್ತ್ರಸನ್ನದ್ಧ ಕಾನಾನ್ಯರನ್ನು ಓಡಿಸಿ ಬಿಟ್ಟರು, ಫಲಿತಾಂಶವನ್ನು ನಿಜವಾಗಿ ನಿರ್ಧರಿಸಿದಾತನು ದೇವರೇ. ಬತ್ತಿ ಹೋಗಿದ್ದ ಹೊಳೆಯಲ್ಲಿ ಪ್ರವಾಹವು ಒಮ್ಮೆಲೇ ದಡ ಮೀರಿ ಹರಿಯುವಂತೆ ಆತನು ಮಾಡಿದ್ದರಿಂದ, ಆ ಭೀಕರ ರಥಗಳು ಚಲಿಸದೇ ಹೋದವು.
ಕೆಳಗಡೆ ನೀವು ಆ ಕಿಷೋನ್ ಹೊಳೆಯ ಒಂದು ಭಾಗವನ್ನು ಕಾಣುತ್ತೀರಿ. ಮಳೆಗಾಲದಲ್ಲಿ ಅದು ದಡ ಮೀರಿ ಹರಿದು, ಆ ಕ್ಷೇತ್ರವನ್ನು ಜವುಳು ಭೂಮಿಯಾಗಿ ಮಾಡ ಬಲ್ಲದು. ಅಂತಹ ಕೆಸರ ಮಧ್ಯೆ ಕಾನಾನ್ಯ ಯುದ್ಧ ರಥಗಳು ಪಾರಾಗ ಪ್ರಯತ್ನಿಸುವುದನ್ನು ಊಹಿಸಿ ಕೊಳ್ಳಿರಿ. ಉಗ್ರ ಪ್ರವಾಹಗಳು ಓಡುತ್ತಿದ್ದ ಸೈನಿಕರನ್ನು ಅಥವಾ ರಥಗಳನ್ನು, ಯಾ ಇಬ್ಬರನ್ನೂ ಸೆಳೆದೊಯ್ದಿರಬೇಕು. ಇಸ್ರಾಯೇಲ್ಯರ ವಿಜಯವು ಸೇನಾಪತಿ ಸೀಸೆರನನ್ನೂ ಬೆನ್ನಟ್ಟಿತು, ಅವನು ರಥವನ್ನು ಬಿಟ್ಟು, ಯುದ್ಧರಂಗದಿಂದ ಪಲಾಯನ ಗೈದನು. ಅನಂತರ, ಯಾಯೇಲಳೆಂಬ ಹೆಂಗಸಿನ ಗುಡಾರದಲ್ಲಿ ಅವನು ಆಶ್ರಯವನ್ನು ಪಡೆಯಲಾಗಿ, ಆಕೆ ತಕ್ಕ ಸಮಯಕ್ಕಾಗಿ ಕಾದು, ಆ ಶತ್ರುವನ್ನು ಕೊಂದು ಹಾಕಿದಳು.—ನ್ಯಾಯಸ್ಥಾಪಕರು 4:17-22.
ಹೀಗೆ ಇಸ್ರಾಯೇಲ್ ಇತಿಹಾಸದ ಒಂದು ಪ್ರಮುಖ ಹಾಗೂ ಜಯಶಾಲಿ ಪ್ರಕರಣವು, ದೆಬೋರಳ ಮುಂದೆ ಮತ್ತು ತಾಬೋರ್ ಬೆಟ್ಟದ ಮೇಲಿಂದ ಅದನ್ನು ವೀಕ್ಷಿಸಿದಿರ್ದ ಬಹುದಾದ ಬೇರೆಯವರ ಮುಂದೆ ಬಿಚ್ಚಲ್ಪಟ್ಟಿತು. (w90 5/1)
[ಅಧ್ಯಯನ ಪ್ರಶ್ನೆಗಳು]
a ನಕ್ಷೆಯನ್ನುಮತ್ತು ತಾಬೋರ್ನ ದೊಡ್ಡದಾದ, ಸ್ಪಷ್ಟ ಚಿತ್ರವನ್ನು, 1990 ಕ್ಯಾಲೆಂಡರ್ ಆಫ್ ಜೆಹೋವಸ್ ವಿಟ್ನೆಸಸ್ನಲ್ಲಿ ನೋಡಿರಿ
[ಪುಟ 22 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[Picture Credit Lines on page 23]
Pictorial Archive (Near Eastern History) Est.
Pictorial Archive (Near Eastern History) Est.
Pictorial Archive (Near Eastern History) Est.