-
‘ಪ್ರಾರ್ಥನೆಯನ್ನು ಕೇಳುವಾತನು’ಕಾವಲಿನಬುರುಜು—2011 | ಏಪ್ರಿಲ್ 1
-
-
ಯೆಹೋವ ದೇವರು ಭಕ್ತ ಜನರ ಮನಃಪೂರ್ವಕ ಪ್ರಾರ್ಥನೆಗಳನ್ನು ನಿಜವಾಗಿ ಉತ್ತರಿಸುತ್ತಾನೋ? ಖಂಡಿತವಾಗಿಯೂ. ಯಾಬೇಚ ಎಂಬ ವ್ಯಕ್ತಿಯ ವೃತ್ತಾಂತವು ಯೆಹೋವನು ‘ಪ್ರಾರ್ಥನೆಯನ್ನು ಕೇಳುವಾತನು’ ಎಂಬದನ್ನು ತೋರಿಸುತ್ತದೆ. ಯಾಬೇಚನ ಕುರಿತು ಬೈಬಲ್ನಲ್ಲಿರುವ ಮಾಹಿತಿ ಕೊಂಚ. (ಕೀರ್ತನೆ 65:2) ಅದು ನಾವು ನೆನಸದಂಥ ಒಂದು ಭಾಗದಲ್ಲಿ ಅಂದರೆ ಒಂದನೇ ಪೂರ್ವಕಾಲವೃತ್ತಾಂತದ ಆರಂಭದಲ್ಲಿರುವ ವಂಶಾವಳಿಯ ನಡುವೆಯಿದೆ. ನಾವೀಗ 1 ಪೂರ್ವಕಾಲವೃತ್ತಾಂತ 4:9, 10ನ್ನು ಪರಿಶೀಲಿಸೋಣ.
ಯಾಬೇಚನ ಬಗ್ಗೆ ನಮಗೆ ಗೊತ್ತಿರುವುದೆಲ್ಲವೂ ಈ ಎರಡು ವಚನಗಳಲ್ಲಿ ಮಾತ್ರ ಇದೆ. 9ನೇ ವಚನಕ್ಕನುಸಾರ “ಇವನನ್ನು ಬಹುವೇದನೆಯಿಂದ ಹೆತ್ತೆನೆಂದು ಹೇಳಿ ಇವನ ತಾಯಿ ಇವನಿಗೆ ಯಾಬೇಚೆಂದು ಹೆಸರಿಟ್ಟಳು.”a ಆಕೆ ಆ ಹೆಸರನ್ನು ಆಯ್ಕೆಮಾಡಿದ್ದೇಕೆ? ಈ ಮಗನನ್ನು ಹೆರುವಾಗ ಆಕೆಗೆ ಸಹಜ ನೋವಿಗಿಂತ ಹೆಚ್ಚಿನ ನೋವಿತ್ತೆಂಬ ಕಾರಣಕ್ಕೊ? ಅಥವಾ, ಮಗು ಹುಟ್ಟುವಾಗ ತನ್ನ ಜೊತೆ ಸಂತೋಷಪಡಲು ಗಂಡನಿಲ್ಲವಲ್ಲಾ ಎಂದು ವಿಧವೆ ಆಗಿದ್ದಿರಬಹುದಾದ ಆಕೆ ಹಲುಬುತ್ತಿದ್ದದರಿಂದಲೋ? ಬೈಬಲ್ ಇದೇನನ್ನೂ ಹೇಳುವುದಿಲ್ಲ. ವಿಷಯ ಏನೇ ಇರಲಿ, ಆಕೆ ತನ್ನ ಈ ಮಗನ ಬಗ್ಗೆ ಹೆಮ್ಮೆಯಿಂದ ಬೀಗುವ ದಿನ ಮುಂದೆ ಖಂಡಿತ ಬರಲಿತ್ತು. ಯಾಬೇಚನ ಅಣ್ಣತಮ್ಮಂದಿರು ಒಳ್ಳೇ ಜನರಾಗಿದ್ದಿರಬಹುದೇನೊ ನಿಜ ಆದರೆ ಅವನು “ತನ್ನ ಅಣ್ಣತಮ್ಮಂದಿರಲ್ಲಿ ಘನವಂತನಾಗಿದ್ದನು.”
-
-
‘ಪ್ರಾರ್ಥನೆಯನ್ನು ಕೇಳುವಾತನು’ಕಾವಲಿನಬುರುಜು—2011 | ಏಪ್ರಿಲ್ 1
-
-
a ಯಾಬೇಚ ಎಂಬ ಹೆಸರಿನ ಮೂಲಪದದ ಅರ್ಥ “ನೋವು” ಆಗಿರಬಲ್ಲದು.
-