ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್ಗಳು
ಆಗಸ್ಟ್ 7-13
ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 28-31
“ಯೆಹೋವನು ವಿಧರ್ಮಿ ಜನಾಂಗಕ್ಕೆ ಪ್ರತಿಫಲ ಕೊಟ್ಟನು”
it-2 1136 ¶4
ತೂರ್
ಪಟ್ಟಣದ ನಾಶ. ರಾಜ ನೆಬೂಕದ್ನೆಚ್ಚರನು ತೂರಿಗೆ ವಿರುದ್ಧವಾಗಿ ಹಾಕಿದ್ದ ಮುತ್ತಿಗೆ ದೀರ್ಘಕಾಲದ್ದಾಗಿತ್ತು. ಸೈನಿಕರು ಶಿರಸ್ತ್ರಾಣಗಳನ್ನು ಧರಿಸಿಯೇ ಇದ್ದರು. ಆದ್ದರಿಂದ ಶಿರಸ್ತ್ರಾಣದ ಸತತ ಉಜ್ಜುವಿಕೆಯಿಂದ ಅವರ ತಲೆ ‘ಬೋಳಾಯಿತು.’ ಮುತ್ತಿಗೆಯ ನಿರ್ಮಾಣ ಕೆಲಸಕ್ಕಾಗಿ ಸಾಮಾನುಗಳನ್ನು ಹೊತ್ತು ಹೊತ್ತು ಅವರ ಹೆಗಲುಗಳು ಸವೆದು ‘ಕಾಯಿಕಟ್ಟಿದವು.’ ತೂರಿನ ಮೇಲೆ ದಂಡನಾ ತೀರ್ಪನ್ನು ನಿರ್ವಹಿಸಲು ಯೆಹೋವನ ಸಾಧನವಾಗಿ ಸೇವೆಮಾಡಿದ್ದಕ್ಕೆ ನೆಬೂಕದ್ನೆಚ್ಚರನಿಗೆ ಯಾವ ‘ಸಂಬಳವೂ’ ಸಿಕ್ಕಿರಲಿಲ್ಲ. ಅದನ್ನು ಒದಗಿಸಿಕೊಡಲು ದೇವರು ಅವನಿಗೆ ಐಗುಪ್ತದೇಶದ ಐಶ್ವರ್ಯವನ್ನು ಕೊಳ್ಳೆಯಾಗಿ ಕೊಟ್ಟನು. (ಯೆಹೆ 29:17-20) ಯೆಹೂದಿ ಚರಿತ್ರೆಗಾರ ಜೊಸೀಫಸನಿಗೆ ಅನುಸಾರ, ತೂರಿಗೆ ಹಾಕಲಾದ ಮುತ್ತಿಗೆಯು 13 ವರ್ಷಗಳ ತನಕ ಮುಂದುವರಿಯಿತು. ಅದರಿಂದಾಗಿ ಬಾಬೆಲಿನವರು ತುಂಬಾ ನಷ್ಟವನ್ನು ಅನುಭವಿಸಿದರು. ನೆಬೂಕದ್ನೆಚ್ಚರನ ಸೈನ್ಯವು ಪಟ್ಟ ಪ್ರಯಾಸವೆಷ್ಟು ಮತ್ತು ಅದೆಷ್ಟು ಪರಿಣಾಮಕಾರಿಯಾಗಿತ್ತು ಎಂಬದನ್ನು ಜಾಗತಿಕ ಇತಿಹಾಸವು ಸರಿಯಾಗಿ ದಾಖಲಿಸಿರುವುದಿಲ್ಲ. ಆದರೆ ತೂರ್ ಮತ್ತು ಅದರ ನಿವಾಸಿಗಳಿಗಾದ ಸಂಹಾರ-ನಾಶನವು ತೀರಾ ಅಪಾರ.—ಯೆಹೆ 26:7-12.
it-1 698 ¶5
ಈಜಿಪ್ಟ್, ಈಜಿಪ್ಟಿನವರು
ನೆಬೂಕದ್ನೆಚ್ಚರನ 37ನೆಯ ವರ್ಷದ (ಕ್ರಿ.ಪೂ. 588) ದಾಖಲೆಯಿರುವ ಬಬಿಲೋನ್ಯ ಪ್ರಮಾಣ ಗ್ರಂಥವೊಂದು ಸಿಕ್ಕಿದೆ. ಈ ದಾಖಲೆಯು ಅವನು ಐಗುಪ್ತದ ವಿರುದ್ಧವಾಗಿ ಮಾಡಿದ ಒಂದು ಮಿಲಿಟರಿ ಅಭಿಯಾನವನ್ನು ತಿಳಿಸುತ್ತದೆ. ಇದು ಅವನ ಆರಂಭದ ಯುದ್ಧ ವಿಜಯಕ್ಕೆ ಸಂಬಂಧಿಸಿದೆಯಾ ಅಥವಾ ತರುವಾಯದ ಮಿಲಿಟರಿ ಆಕ್ರಮಣಗಳಿಗೆ ಸಂಬಂಧಿಸಿದೆಯಾ ಎಂದು ಹೇಳಸಾಧ್ಯವಿಲ್ಲ. ಆದರೆ ನೆಬೂಕದ್ನೆಚ್ಚರನಿಗೆ ಐಗುಪ್ತದ ಐಶ್ವರ್ಯವು ‘ಸಂಬಳವಾಗಿ’ ಸಿಕ್ಕಿದ್ದು ನಿಜವೆಂದು ಆ ದಾಖಲೆ ತೋರಿಸುತ್ತದೆ. ದೇವಜನರನ್ನು ವಿರೋಧಿಸಿದ್ದ ತೂರಿನ ವಿರುದ್ಧವಾಗಿ ಯುದ್ಧವನ್ನು ಮಾಡಿ ಯೆಹೋವನ ತೀರ್ಪನ್ನು ನಿರ್ವಹಿಸಿದಕ್ಕಾಗಿ ಅವನಿಗೆ ಐಗುಪ್ತದ ಕೊಳ್ಳೆ ವೇತನವಾಗಿ ದೊರೆಯಿತು.—ಯೆಹೆ 29:18-20; 30:10-12.
g86 11/8 27 ¶4-5
ಎಲ್ಲ ರೀತಿಯ ತೆರಿಗೆಗಳನ್ನು ಪಾವತಿಸಬೇಕಾ?
ಇದು ಹೇಗೆ? ಐಹಿಕ ಸರಕಾರವು ಮಾಡಿದ ಸೇವೆಗಾಗಿ ಸ್ವತಃ ನಿರ್ಮಾಣಿಕನೇ ಸಂಬಳ ಕೊಟ್ಟ ವಿಷಯವನ್ನು ನಾವಿಲ್ಲಿ ಕಾಣಬಹುದು. ಪುರಾತನ ಪಟ್ಟಣವಾದ ತೂರಿನ ದುಷ್ಟತನಕ್ಕಾಗಿ ಯೆಹೋವನ ನೀತಿಯುತ ಕ್ರೋಧವು ಅದರ ಮೇಲೆ ಬಂತು. ತೂರಿನ ವಿರುದ್ಧ ದಂಡನೆಯ ತೀರ್ಪನ್ನು ನಿರ್ವಹಿಸಲಿಕ್ಕೆ ದೇವರು ಬಾಬೆಲಿನ ರಾಜ ನೆಬೂಕದ್ನೆಚ್ಚರನ ಸೇನಾಬಲವನ್ನು ಬಳಸಿದನು. ಬಾಬೆಲಿಗೆ ಜಯ ಸಿಕ್ಕಿತು. ಆದರೂ ಯುದ್ಧದಲ್ಲಿ ಅದು ವಿಪರೀತ ನಷ್ಟವನ್ನು ಅನುಭವಿಸಿತು. ಯುದ್ಧದ ಮೂಲಕ ಮಾಡಿದ ಸೇವೆಗಾಗಿ ಬಾಬೆಲಿಗಾದ ನಷ್ಟವನ್ನು ಭರ್ತಿಮಾಡಿ ಕೊಡಬೇಕೆಂದು ಯೆಹೋವನಿಗೆ ಅನಿಸಿತು. ಯೆಹೆಜ್ಕೇಲ 29:18, 19 ಹೇಳುವುದು: “ನರಪುತ್ರನೇ, ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ತೂರಿಗೆ ಮುತ್ತಿಗೆ ಹಾಕಿ ತನ್ನ ಸೈನಿಕರಿಂದ ಬಹುಶ್ರಮದ ಸೇವೆಯನ್ನು ಮಾಡಿಸಿದ್ದಾನೆ. . . . ಆದರೂ ಮುತ್ತಿಗೆಯಲ್ಲಿ ಅವನು ಪಟ್ಟ ಶ್ರಮಕ್ಕೆ ಅವನಿಗಾಗಲಿ ಅವನ ಸೈನಿಕರಿಗಾಗಲಿ ತೂರಿನಿಂದ ಸಂಬಳವೇನೂ ಸಿಕ್ಕಲಿಲ್ಲ. ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ—‘ಇಗೋ, ನಾನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಗೆ ಐಗುಪ್ತ ದೇಶವನ್ನು ಕೊಡುವೆನು. ಅವನು ಅದರ ಜನ ಯಾವತ್ತನ್ನೂ ಒಯ್ದು ಆ ದೇಶವನ್ನು ಸೂರೆಮಾಡಿ ಕೊಳ್ಳೆ ಹೊಡೆಯುವನು. ಅದೇ ಅವನ ಸೈನ್ಯಕ್ಕೆ ಸಂಬಳ.’”
ಬಾಬೆಲಿನ ರಾಜ ನೆಬೂಕದ್ನೆಚ್ಚರನು ಅಹಂಕಾರಿಯೂ ಸ್ವಾರ್ಥಿಯೂ ಆಗಿದ್ದ ವಿಧರ್ಮಿ ಪ್ರಭುವೆಂದು ಬೈಬಲ್ ವಿದ್ಯಾರ್ಥಿಗಳಾದ ನಮಗೆ ಗೊತ್ತಿದೆ. ಬಾಬೆಲು ಮತ್ತು ಅದರ ಸೈನ್ಯಗಳು ತಮ್ಮ ಸೆರೆಯಾಳುಗಳನ್ನು ಕ್ರೂರವಾಗಿ ಹಿಂಸಿಸುವುದಕ್ಕೆ ಖ್ಯಾತರಾಗಿದ್ದರು. ಯೆಹೋವನು ಅಂಥ ನಡತೆಯನ್ನು ಒಪ್ಪುವ ದೇವರಲ್ಲ ನಿಜ. ಆದರೂ ಆತನು ಅವರ ಸೇವೆಯ ಸಾಲವನ್ನು ತೆರಬೇಕಾಗಿತ್ತು. ಅದನ್ನು ದೇವರು ಪೂರ್ಣವಾಗಿ ಸಲ್ಲಿಸಿಬಿಟ್ಟನು.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-2 604 ¶4-5
ಪರಿಪೂರ್ಣತೆ
ಮೊದಲನೆಯ ಪಾಪಿ ಮತ್ತು ತೂರಿನ ರಾಜ. ಮನುಷ್ಯನ ಪಾಪ ಮತ್ತು ಅಪರಿಪೂರ್ಣತೆಗೆ ಮುಂಚಿತವಾಗಿಯೆ ಆತ್ಮಲೋಕದಲ್ಲಿ ಪಾಪ ಮತ್ತು ಅಪರಿಪೂರ್ಣತೆ ಬಂದಿತ್ತು. ಇದು ಯೋಹಾನ 8:44 ರಲ್ಲಿರುವ ಯೇಸುವಿನ ಮಾತುಗಳಿಂದ ಗೊತ್ತಾಗುತ್ತದೆ. ಆದಿಕಾಂಡ 3ನೆಯ ಅಧ್ಯಾಯದಲ್ಲೂ ಅದನ್ನು ತಿಳಿಸಲಾಗಿದೆ. ಆದರೂ ಯೆಹೆಜ್ಕೇಲ 28:12-19 ರಲ್ಲಿ ದಾಖಲೆಯಾದ ಶೋಕಗೀತವನ್ನು ಮನುಷ್ಯನಿಗೆ ಅಂದರೆ ‘ತೂರಿನ ಅರಸನಿಗೆ’ ನಿರ್ದೇಶಿಸಲಾಗಿದೆ. ಆರಂಭದಿಂದಲೇ ಪಾಪಮಾಡಿದ ದೇವರ ಆತ್ಮಪುತ್ರನು ತಕ್ಕೊಂಡ ಕೆಟ್ಟ ಮಾರ್ಗಕ್ಕೂ ತೂರಿನ ಅರಸನಿಗೂ ಸಮಾಂತರ ಇದೆ. ‘ತೂರಿನ ಅರಸನು’ ಅಹಂಕಾರಿಯಾಗಿದ್ದನು, ತನ್ನನ್ನು ‘ಒಬ್ಬ ದೇವರಾಗಿ’ ಮಾಡಿಕೊಂಡನು, ಅವನನ್ನು “ಕೆರೂಬಿ” ಎಂದು ಕರೆಯಲಾಯಿತು ಮತ್ತು ‘ದೇವರ ಉದ್ಯಾನವನ ಏದೆನಿನಲ್ಲಿ’ ಇದ್ದನೆಂದೂ ಸೂಚಿಸಲಾಗಿದೆ. ಬೈಬಲಿನಲ್ಲಿ ಪಿಶಾಚನಾದ ಸೈತಾನನ ಬಗ್ಗೆ ಹೇಳಲಾದ ಮಾಹಿತಿಗೆ ಇದು ಅನುರೂಪದಲ್ಲಿದೆ. ಪಿಶಾಚ ಸೈತಾನನು ಸಹ ಹೆಮ್ಮೆಯಿಂದ ಉಬ್ಬಿಹೋದನು, ಏದೆನ್ ತೋಟದಲ್ಲಿ ಸರ್ಪಕ್ಕೆ ಸೂಚಿತನಾದನು ಮತ್ತು ‘ಈ ವಿಷಯಗಳ ವ್ಯವಸ್ಥೆಯ ದೇವನಾದನು.’—1ತಿಮೊ 3:6; ಆದಿ 3:1-5, 14, 15; ಪ್ರಕ 12:9; 2ಕೊರಿಂ 4:4.
‘ಪರಿಪೂರ್ಣ ಸುಂದರಿಯಾಗಿದ್ದೇನೆ’ ಎಂದು ಹೇಳಿಕೊಳ್ಳುತ್ತಿದ್ದ ಪಟ್ಟಣದಲ್ಲಿ ತೂರಿನ ಈ ಅನಾಮಧೇಯ ಅರಸನು ವಾಸಿಸುತ್ತಿದ್ದನು. ಅವನು ಸ್ವತಃ ‘ಸರ್ವಸುಲಕ್ಷಣಶಿರೋಮಣಿ, ಪೂರ್ಣಜ್ಞಾನಿ, ಪರಿಪೂರ್ಣಸುಂದರ’ (ಹಿಬ್ರೂ ಕಾ-ಲಾಲ್ಗೆ ಸಂಬಂಧಿಸಿದ ವಿಶೇಷಣ) ಆಗಿದ್ದನು. ಅವನು ಸೃಷ್ಟಿಯಾದ ದಿನದಿಂದ ಅವನಲ್ಲಿ ಅಪರಾಧವು ಸಿಕ್ಕುವ ತನಕ ಅವನ ನಡತೆ ನಿರ್ದೋಷವಾಗಿ ಕಾಣುತ್ತಿತ್ತು. (ಯೆಹೆ 27:3; 28:12, 15) ಯೆಹೆಜ್ಕೇಲನ ಈ ಶೋಕಗೀತವು ತೂರಿನ ಯಾವನೇ ಒಬ್ಬ ಅರಸನಿಗೆ ಅನ್ವಯಿಸುವುದಿಲ್ಲ. ಅದನ್ನು ಪ್ರಥಮವಾಗಿ ಹಾಗೂ ನೇರವಾಗಿ ತೂರಿನ ರಾಜವಂಶದ ಎಲ್ಲಾ ಅರಸರುಗಳಿಗೆ ಅನ್ವಯಿಸಬಹುದು. (ಯೆಶಾ 14:4-20 ರಲ್ಲಿ ಅನಾಮಧೇಯ ‘ಬಾಬೆಲಿನ ರಾಜನ’ ವಿರುದ್ಧ ನುಡಿಯಲಾದ ಪ್ರವಾದನೆಯನ್ನು ಹೋಲಿಸಿ.) ವಿಷಯ ಹೀಗಿರುವಲ್ಲಿ, ತೂರಿನ ಅರಸರು ರಾಜ ದಾವೀದ ಮತ್ತು ಸೊಲೊಮೋನನಿಗೆ ತೋರಿಸಿದ ಆರಂಭದ ಗೆಳೆತನ ಮತ್ತು ಸಹಕಾರಕ್ಕೆ ಅದು ಸೂಚಿಸುತ್ತಿರಬಹುದು. ಹೇಗಂದರೆ ಮೊರೀಯ ಬೆಟ್ಟದಲ್ಲಿ ಯೆಹೋವನ ಆಲಯವು ಕಟ್ಟಲ್ಪಡುತ್ತಿದ್ದ ಸಮಯದಲ್ಲಿ ತೂರ್ ದೇಶವು ಸಹ ಆ ಕಟ್ಟುವಿಕೆಗೆ ಸಹಾಯಮಾಡಿತ್ತು. ಹಾಗಾಗಿ ಆರಂಭದಲ್ಲಿ ಯೆಹೋವನ ಜನರಾದ ಇಸ್ರಾಯೇಲ್ಯರ ಕಡೆಗೆ ತೂರ್ ದೇಶದ ಅಧಿಕೃತ ಮನೋಭಾವ ಒಳ್ಳೆಯದಿತ್ತು. ಅದರಲ್ಲಿ ಯಾವುದೇ ಅಪರಾಧ ಸಿಕ್ಕಿರಲಿಲ್ಲ. ಅದರ ನಡತೆ ನಿರ್ದೋಷವಾಗಿತ್ತು. (1ಅರ 5:1-18; 9:10, 11, 14; 2ಪೂರ್ವ 2:3-16) ಸಮಯಾನಂತರ ತೂರಿನ ಅರಸರು ತಮ್ಮ “ನಿರ್ದೋಷ” ನಡವಳಿಕೆಯನ್ನು ತೊರೆದುಬಿಟ್ಟರು. ದೇವರ ಪ್ರವಾದಿಗಳಾದ ಯೋವೇಲ, ಆಮೋಸ ಹಾಗೂ ಯೆಹೆಜ್ಕೇಲರಿಂದ ಖಂಡನೆಗೆ ಗುರಿಯಾದರು. (ಯೋವೇ 3:4-8; ಆಮೋ 1:9, 10) ಹೀಗೆ ‘ತೂರಿನ ಅರಸನ’ ನಡತೆ ಮತ್ತು ದೇವರ ಮಹಾ ಶತ್ರುವಾದ ಸೈತಾನನ ನಡತೆಯಲ್ಲಿ ಸಮಾನತೆ ಇದೆ ಎಂದು ಈ ಪ್ರವಾದನೆ ತೋರಿಸುತ್ತದೆ. ಮಾತ್ರವಲ್ಲ “ಪರಿಪೂರ್ಣತೆ” ಮತ್ತು “ನಿರ್ದೋಷ” ಪದಗಳನ್ನು ಸೀಮಿತ ಅರ್ಥದಲ್ಲಿ ಬಳಸಸಾಧ್ಯತೆಯಿದೆ ಎಂಬದಕ್ಕೆ ಇದು ಉದಾಹರಣೆ.
ಆಗಸ್ಟ್ 14-20
ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 32-34
“ಕಾವಲುಗಾರನ ಮಹತ್ವದ ಜವಾಬ್ದಾರಿ”
it-2 1172 ¶2
ಕಾವಲುಗಾರ
ಸಾಂಕೇತಿಕ ಪ್ರಯೋಗ. ಯೆಹೋವನು ಇಸ್ರಾಯೇಲ್ ಜನಾಂಗಕ್ಕೆ ಪ್ರವಾದಿಗಳನ್ನು ಕಳುಹಿಸಿದನು. ಅವರಲ್ಲಿ ಕೆಲವರು ಸಾಂಕೇತಿಕ ಕಾವಲುಗಾರರಾಗಿ ಕೆಲಸಮಾಡಿದರು. (ಯೆರೆ 6:17) ಸರದಿಯಲ್ಲಿ ಇವರು ಕೆಲವೊಮ್ಮೆ ಇತರ ಕಾವಲುಗಾರರ ಕುರಿತು ಸಾಂಕೇತಿಕ ರೀತಿಯಲ್ಲಿ ಮಾತಾಡಿದರು ಸಹ. (ಯೆಶಾ 21:6, 8; 52:8; 62:6; ಹೋಶೇ 9:8) ಪ್ರವಾದಿಗಳಾಗಿದ್ದ ಈ ಕಾವಲುಗಾರರಿಗೆ ಒಂದು ಜವಾಬ್ದಾರಿಯಿತ್ತು. ಬರಲಿದ್ದ ನಾಶನದ ಬಗ್ಗೆ ದುಷ್ಟರಿಗೆ ಅವರು ಎಚ್ಚರಿಕೆ ಕೊಡಬೇಕಾಗಿತ್ತು. ಅವರು ಹಾಗೆ ಮಾಡದಿದ್ದರೆ ದುಷ್ಟರ ನಾಶಕ್ಕೆ ಅವರೇ ಹೊಣೆಗಾರರಾಗುತ್ತಿದ್ದರು. ಆದರೆ ದುಷ್ಟರು ಆ ಎಚ್ಚರಿಕೆಗೆ ಕಿವಿಗೊಡದೆ ದುರ್ಲಕ್ಷಮಾಡಿದರೆ ತಮ್ಮ ಸಾವಿಗೆ ತಾವೇ ಹೊಣೆಗಾರರಾಗುತ್ತಿದ್ದರು. (ಯೆಹೆ 3:17-21; 33:1-9) ಒಬ್ಬ ಪ್ರವಾದಿ ಅಪನಂಬಿಗಸ್ತನಾದರೆ ಅವನು ನಿಷ್ಪ್ರಯೋಜಕನು. ಅವನು ಕುರುಡು ಕಾವಲುಗಾರನಿಗೆ ಅಥವಾ ಬೊಗಳಲಾರದ ಮೂಗ ನಾಯಿಗೆ ಸಮಾನವಾಗಿದ್ದನು.—ಯೆಶಾ 56:10.
w88 1/1 28 ¶13
ದೇವರ ರಾಜ್ಯದ ಬಗ್ಗೆ ಸಾರುತ್ತಾ ಇರಿ
ರಕ್ತಾಪರಾಧದಿಂದ ತಪ್ಪಿಸಿಕೊಳ್ಳಿ
13 ಯೆಹೋವನ ಸಮರ್ಪಿತ ಸೇವಕರಿಗೆ ಸಹ ದೇವರ ನ್ಯಾಯತೀರ್ಪಿನ ಬಗ್ಗೆ ಜನರಿಗೆ ಎಚ್ಚರಿಕೆ ಕೊಡುವ ಜವಾಬ್ದಾರಿ ಇದೆ. ಇದನ್ನು ಯೆಹೆಜ್ಕೇಲನ ಕಾಲದಲ್ಲಿ ಅವನಿಗಿದ್ದ ಜವಾಬ್ದಾರಿಗೆ ಹೋಲಿಸಬಹುದು. ಅವನನ್ನು ಇಸ್ರಾಯೇಲ್ ಮನೆತನಕ್ಕೆ ಕಾವಲುಗಾರನಾಗಿ ನೇಮಿಸಲಾಗಿತ್ತು. ಅವರು ಕೆಟ್ಟತನವನ್ನು ಬಿಟ್ಟುಬಿಡದಿದ್ದರೆ ಅವರ ಮೇಲೆ ನಾಶನ ಬರಲಿದೆ ಎಂದವನು ಎಚ್ಚರಿಸಬೇಕಿತ್ತು. ಕಾವಲುಗಾರನಾಗಿದ್ದ ಯೆಹೆಜ್ಕೇಲನು ಒಂದುವೇಳೆ ಎಚ್ಚರಿಕೆ ನೀಡದಿದ್ದರೂ ದುಷ್ಟರ ನಾಶನ ಮಾತ್ರ ಬಂದೇ ಬರಲಿತ್ತು. ಆದರೆ ಎಚ್ಚರಿಕೆ ನೀಡದ ಆಲಸಿ ಕಾವಲುಗಾರನೇ ಅವರ ಸಾವಿಗೆ ಹೊಣೆಯಾಗಲಿದ್ದನು. ದುಷ್ಟರ ಮೇಲೆ ನ್ಯಾಯತೀರ್ಪನ್ನು ವಿಧಿಸುವ ಬಗ್ಗೆ ಯೆಹೋವನ ಭಾವನೆ ಹೇಗಿತ್ತು? ಆತನು ಹೇಳುವುದು: “ದುಷ್ಟನ ಸಾವಿನಲ್ಲಿ ನನಗೆ ಲೇಶವಾದರೂ ಸಂತೋಷವಿಲ್ಲ; ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ. ಇಸ್ರಾಯೇಲ್ ವಂಶದವರೇ, ನಿಮ್ಮ ದುರ್ಮಾರ್ಗಗಳನ್ನು ಬಿಡಿರಿ, ಬಿಟ್ಟುಬಿಡಿರಿ. ನೀವು ಸಾಯಲೇಕೆ?”—ಯೆಹೆಜ್ಕೇಲ 33:1-11.
ಆಗಸ್ಟ್ 21-27
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
w88 9/15 24 ¶11
“ನಾನೇ ಯೆಹೋವನು ಎಂದು ಅವರಿಗೆ ಗೊತ್ತಾಗುವದು”
11 ಬಾಬೆಲಿನಲ್ಲಿ ಸೆರೆಯಾಗಿದ್ದ ಉಳಿಕೆಯವರು ಹಿಂದೆ ಬರುವ ಮುಂಚೆ ಯೆಹೂದವು ನಿರ್ಜನ ಕಾಡಿನಂತಿತ್ತು. ಅವರು ಹಿಂದಿರುಗಿದ ಮೇಲೆ ಆ ದೇಶವು ಫಲಭರಿತ ‘ಏದೆನ್ ಉದ್ಯಾನವನದಂತೆ’ ಮಾರ್ಪಟ್ಟಿತು. (ಯೆಹೆಜ್ಕೇಲ 36:33-36 ಓದಿ.) ತದ್ರೀತಿಯಲ್ಲಿ, ಒಮ್ಮೆ ನಿರ್ಜನ ಕಾಡಿನಂತಿದ್ದ ಅಭಿಷಿಕ್ತ ಉಳಿಕೆಯವರ ಆಸ್ತಿಯನ್ನು 1919 ರಿಂದ ಯೆಹೋವನು ಒಂದು ಫಲಸಂಪನ್ನವಾದ ಆಧ್ಯಾತ್ಮಿಕ ಪರದೈಸಾಗಿ ಮಾರ್ಪಡಿಸಿದ್ದಾನೆ. ಈಗ ‘ಮಹಾ ಸಮೂಹದವರೂ’ ಅದರಲ್ಲಿ ಪಾಲುಗಾರರು. ಆಧ್ಯಾತ್ಮಿಕ ಪರದೈಸವು ಈಗ ಪವಿತ್ರ ಜನರಿಂದ ತುಂಬಿಕೊಂಡಿದೆ. ಆದ್ದರಿಂದ ಪ್ರತಿಯೊಬ್ಬ ಸಮರ್ಪಿತ ಕ್ರೈಸ್ತನು ಅದನ್ನು ಶುದ್ಧವಾಗಿಡಲು ಶ್ರಮಪಡುತ್ತಾ ಇರಲಿ.—ಯೆಹೆಜ್ಕೇಲ 36:37, 38.
ಆಗಸ್ಟ್ 28–ಸೆಪ್ಟೆಂಬರ್ 3
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
w12 9/1 21 ¶2
“ನಾನೇ ಯೆಹೋವ ಎಂದು ಜನಾಂಗಗಳಿಗೆ ಗೊತ್ತಾಗುವದು”
“ನನ್ನ ಪವಿತ್ರ ನಾಮವನ್ನು ಇನ್ನು ಮುಂದಕ್ಕೆ ಅಪಕೀರ್ತಿಗೆ ಗುರಿಯಾಗಲೀಸೆನು” ಎನ್ನುತ್ತಾನೆ ಯೆಹೋವನು. ಅನ್ಯಾಯದ ಕೃತ್ಯಗಳಿಗಾಗಿ ಜನರು ದೇವರನ್ನು ದೂರುವಾಗ ಅವರು ಆತನ ನಾಮವನ್ನು ಅಪಕೀರ್ತಿ, ನಿಂದೆಗೆ ಗುರಿಮಾಡುತ್ತಾರೆ. ಅದು ಹೇಗೆ? ಬೈಬಲಿನಲ್ಲಿ ಹೆಚ್ಚಾಗಿ “ನಾಮ” ಅಥವಾ ಹೆಸರು ಸತ್ಕೀರ್ತಿಯನ್ನು ಸೂಚಿಸುತ್ತದೆ. ಒಂದು ಪರಾಮರ್ಶೆ ಪುಸ್ತಕ ಹೇಳುವುದು, “ದೇವರ ‘ನಾಮವು’ ಆತನ ಬಗ್ಗೆ ಬೈಬಲ್ ಏನನ್ನು ತಿಳಿಸುತ್ತದೋ ಅದಕ್ಕೆ ಸೂಚಿಸುತ್ತದೆ; ನಾಮವು ಆತನ ಸತ್ಕೀರ್ತಿಯನ್ನು, ಆತನ ಗೌರವವನ್ನು ಸಹ ಪ್ರತಿನಿಧಿಸುತ್ತದೆ.” ಯೆಹೋವನ ನಾಮದಲ್ಲಿ ಆತನ ಸತ್ಕೀರ್ತಿಯು ಸಹ ಒಳಗೊಂಡಿದೆ. ಹೇಗೆ? ಉದಾಹರಣೆಗೆ, ಅನ್ಯಾಯದ ವಿಷಯದಲ್ಲಿ ಯಾವ ಸತ್ಕೀರ್ತಿ ಯೆಹೋವನಿಗಿದೆ? ಆತನು ಅನ್ಯಾಯವನ್ನು ಹೇಸುತ್ತಾನೆ! ಅನ್ಯಾಯದಿಂದ ಬಾಧೆಪಡುವವರಿಗೆ ಕನಿಕರ ತೋರಿಸುತ್ತಾನೆ. (ವಿಮೋಚನಕಾಂಡ 22:22-24) ದೇವರು ಯಾವುದನ್ನು ಹೇಸುತ್ತಾನೊ ಅದನ್ನು ಮಾಡುತ್ತಾನೆಂದು ಮನುಷ್ಯರು ಸುಳ್ಳಾಗಿ ದೂರುವಾಗ, ಆತನ ಸತ್ಕೀರ್ತಿಯನ್ನು ಅವರು ಅಪಕೀರ್ತಿಗೆ ಗುರಿಮಾಡುತ್ತಾರೆ ಮತ್ತು ಹಾಳುಮಾಡುತ್ತಾರೆ. ಹೀಗೆ ಅವರು ‘ಆತನ ನಾಮವನ್ನು ನಿಂದಿಸುತ್ತಿರುತ್ತಾರೆ.’—ಕೀರ್ತನೆ 74:10.