ಗೀತೆ 52
ನಿನ್ನ ಹೃದಯವನ್ನು ಕಾಪಾಡಿಕೋ
1. ಕಾಪಾಡು ನಿನ್ನ ಹೃದಯ,
ತ್ಯಜಿಸು ದುರ್ಮಾರ್ಗ.
ದೇವ ಶೋಧಿ ಸುವ ಹೃದ,
ಆಂತರ್ಯವ ಸಹ.
ಕೆಲವೊಮ್ಮೆ ಈ ಹೃದಯ
ತಪ್ಪಿಸುತೆ ಮಾರ್ಗ.
ನಿಯಂತ್ರಿಸು ನೀನದನ್ನು,
ಬಳಸಿ ಮನವ.
2. ಸಿದ್ಧಮಾಡು ಹೃದಯವ
ಪ್ರಾರ್ಥನೆ ಮೂಲಕ.
ದೇವಗೆ ಕೊಟ್ಟು ಸ್ತುತಿಯ,
ಹೇಳು ಚಿಂತೆಗಳ.
ಯೆಹೋವನ ಶುದ್ಧ ನುಡಿ
ಪಾಲಿಸಲು ಯೋಗ್ಯ.
ವರ್ಧಿಸು ನಿಷ್ಠ ಹೃದಯ,
ಮೆಚ್ಚಿಸು ದೇವರ.
3. ಕಾಪಾಡು ನಿನ್ನ ಹೃದಯ,
ತುಂಬಿಸಿ ಸತ್ಯವ.
ತಟ್ಟಲಿ ದೇವರ ವಾಕ್ಯ
ನಿನ್ನ ಹೃದಯವ.
ನಿಷ್ಠ ಪ್ರೀತಿಗೆ ಪಾತ್ರನು,
ಇದು ನಿಸ್ಸಂಶಯ.
ತೋರಿಸು ಪೂರ್ಣ ಭಕ್ತಿಯ
ಆಗು ದೇವಮಿತ್ರ.
(ಕೀರ್ತ. 34:1; ಫಿಲಿ. 4:8; 1 ಪೇತ್ರ 3:4 ಸಹ ನೋಡಿ.)