ಗೀತೆ 83
ನಮಗೆ ಸ್ವನಿಯಂತ್ರಣ ಅಗತ್ಯ
1. ದೇವರ ಪ್ರೀತಿಸಿದರೂ ಪೂರ್ಣ
ಸಂಯಮ ಬೇಕು ಪಾಪದ ಕಾರಣ.
ಮಾಂಸಿಕಾಶೆಯ ಫಲ ಕ್ಲೇಶ.
ದೇವರಾತ್ಮ ನೀಡುತೆ ಜೀವ.
2. ಪ್ರಲೋಭನೆ ಸದಾ ಮುಂದಿರುತೆ,
ಪಾಪ ಸದಾ ನಮ್ಮನ್ನಾಕರ್ಷಿಸುತೆ.
ಸತ್ಯದ ಮುಂದೆ ನಿಲ್ಲದದು.
ನಮ್ಮ ಸುಮನಸ್ಸೇ ಗೆಲ್ಲೋದು.
3. ನಮ್ಮ ನಡತೆ ದೇವನಾಮಕ್ಕೆ
ತರುತೆ ಘನತೆ, ನೀಗಿಸಿ ನಿಂದೆ.
ನಮ್ಮ ನಡೆಯ ಗುರಿ ಇದೇ:
ಸ್ವನಿಯಂತ್ರಣದ ಪಾಲನೆ.
(1 ಕೊರಿಂ. 9:25; ಗಲಾ. 5:23; 2 ಪೇತ್ರ 1:6 ಸಹ ನೋಡಿ.)