ಗೀತೆ 89
ಯೆಹೋವನ ಸೌಹಾರ್ದಯುತ ಮನವಿ: “ನನ್ನ ಮಗನೇ, ವಿವೇಕಿಯಾಗಿರು”
(ಜ್ಞಾನೋಕ್ತಿ 27:11, NW)
1. ಕೊಡು ಹೃದಯ
ಓ ಯುವಕ, ಯುವತಿ.
ತಿಳಿಯುವನಾಗ
ಹಂಗಿಸುವ ವೈರಿ.
ಯೌವನ, ಭಕ್ತಿಯ
ಮನಸಾರೆ ಕೊಡಿ;
ನನಗಾಗಿ
ಬಾಳುತ್ತೀರೆಂದು ತೋರಿಸಿ.
(ಪಲ್ಲವಿ)
ಪ್ರಿಯ ಪುತ್ರ, ಅಮೂಲ್ಯ ಪುತ್ರಿ,
ವಿವೇಕದಿ ಹರ್ಷ ತನ್ನಿ.
ಸ್ವಇಚ್ಛೆಯಿಂದ ಸೇವೆಮಾಡಿ,
ಸ್ವಇಷ್ಟದಿಂದ ಸ್ತುತಿಸಿ.
2. ಹರ್ಷಿಸಿ ಸರ್ವಸ್ವವ
ಕೊಡಿ ಇಷ್ಟದಿ,
ನಾನೆತ್ತುವೆ ಬಿದ್ದರೂ
ನೀವು ಎಡವಿ.
ಯಾರೇ ತೊರೆಯಲಿ,
ಯಾರೇ ಕೈಬಿಡಲಿ,
ನಾ ಪೋಷಿಸುವೆ
ಸದಾ ಸಾಂತ್ವನ ನೀಡಿ.
(ಪಲ್ಲವಿ)
ಪ್ರಿಯ ಪುತ್ರ, ಅಮೂಲ್ಯ ಪುತ್ರಿ,
ವಿವೇಕದಿ ಹರ್ಷ ತನ್ನಿ.
ಸ್ವಇಚ್ಛೆಯಿಂದ ಸೇವೆಮಾಡಿ,
ಸ್ವಇಷ್ಟದಿಂದ ಸ್ತುತಿಸಿ.
(ಧರ್ಮೋ. 6:5; ಪ್ರಸಂ. 11:9; ಯೆಶಾ. 41:13 ಸಹ ನೋಡಿ.)