-
ಯಾಜಕಕಾಂಡ 2:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಅದನ್ನ ಪುರೋಹಿತರಾದ ಆರೋನನ ಮಕ್ಕಳ* ಹತ್ರ ತರಬೇಕು. ಪುರೋಹಿತ ಎಣ್ಣೆ ಬೆರೆತ ನುಣ್ಣಗಿನ ಆ ಹಿಟ್ಟನ್ನ ಮತ್ತು ಅದ್ರ ಮೇಲಿರೋ ಎಲ್ಲ ಸಾಂಬ್ರಾಣಿನ ಹಿಡಿತುಂಬ ತಗೊಂಡು ಯಜ್ಞವೇದಿ ಮೇಲಿರೋ ಬೆಂಕಿಯಲ್ಲಿ ಅರ್ಪಿಸಬೇಕು. ಈ ರೀತಿ ಮಾಡೋದು ಧಾನ್ಯ ಅರ್ಪಣೆನ+ ಪೂರ್ತಿಯಾಗಿ ಅರ್ಪಿಸಿದ್ದಾರೆ ಅಂತ ಸೂಚಿಸುತ್ತೆ. ಯಜ್ಞವೇದಿಯಿಂದ ಮೇಲೇರೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ.
-
-
ಯಾಜಕಕಾಂಡ 5:11, 12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಎರಡು ಕಾಡುಪಾರಿವಾಳ ಅಥವಾ ಎರಡು ಪಾರಿವಾಳ ಮರಿ ತಗೊಳೋಕೆ ಹಣ ಇಲ್ಲದವರು ಏಫಾ ಅಳತೆಯ ಹತ್ತನೇ ಒಂದು ಭಾಗದಷ್ಟು*+ ನುಣ್ಣಗಿನ ಹಿಟ್ಟನ್ನ ಪಾಪಪರಿಹಾರಕ ಅರ್ಪಣೆಯಾಗಿ ಕೊಡೋಕೆ ತರಬೇಕು. ಇದು ಪಾಪಪರಿಹಾರಕ ಅರ್ಪಣೆ ಆಗಿರೋದ್ರಿಂದ ಅದಕ್ಕೆ ಎಣ್ಣೆ ಸೇರಿಸಬಾರದು, ಅದ್ರ ಮೇಲೆ ಸಾಂಬ್ರಾಣಿ ಇಡಬಾರದು. 12 ಅವನು ಆ ಹಿಟ್ಟನ್ನ ಪುರೋಹಿತನಿಗೆ ಕೊಡಬೇಕು. ಪುರೋಹಿತ ಅದ್ರಿಂದ ಒಂದು ಹಿಡಿತುಂಬ ತಗೊಂಡು ಯಜ್ಞವೇದಿ ಮೇಲೆ ಅರ್ಪಿಸಿದ ಯೆಹೋವನ ಅರ್ಪಣೆಗಳ ಮೇಲಿಟ್ಟು ಸುಡಬೇಕು. ಅದ್ರಿಂದ ಹೊಗೆ ಮೇಲೆ ಹೋಗಬೇಕು. ಇದು ಎಲ್ಲ ಹಿಟ್ಟನ್ನ ಅರ್ಪಿಸಿದ್ದಾರೆ ಅಂತ ಸೂಚಿಸುತ್ತೆ. ಇದು ಪಾಪಪರಿಹಾರಕ ಅರ್ಪಣೆ.
-