-
ಆದಿಕಾಂಡ 8:20, 21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 ಆಮೇಲೆ ನೋಹ ಯೆಹೋವನಿಗಾಗಿ ಯಜ್ಞವೇದಿ+ ಕಟ್ಟಿದ. ಶುದ್ಧ ಪ್ರಾಣಿಗಳಿಂದ, ಶುದ್ಧ ಪಕ್ಷಿಗಳಿಂದ+ ಕೆಲವನ್ನ ಅದ್ರ ಮೇಲೆ ಸರ್ವಾಂಗಹೋಮ ಬಲಿಯಾಗಿ ಕೊಟ್ಟ.+ 21 ಆ ಬಲಿಯ ಪರಿಮಳದಿಂದ ಯೆಹೋವನಿಗೆ ಖುಷಿ ಆಯ್ತು.* ಹಾಗಾಗಿ ಯೆಹೋವ ತನ್ನ ಹೃದಯದಲ್ಲಿ ಹೀಗೆ ಅಂದ್ಕೊಂಡನು: “ಇನ್ಮುಂದೆ ಯಾವತ್ತೂ ನಾನು ಮನುಷ್ಯನ ಸಲುವಾಗಿ ಭೂಮಿಗೆ+ ಶಾಪ ಕೊಡಲ್ಲ. ಯಾಕಂದ್ರೆ ಚಿಕ್ಕಂದಿನಿಂದಾನೇ+ ಮನುಷ್ಯನ ಹೃದಯದ ಆಸೆಗಳು ಕೆಟ್ಟದ್ರ ಕಡೆಗೆ ವಾಲುತ್ತೆ. ಅಷ್ಟೇ ಅಲ್ಲ, ನಾನು ಯಾವತ್ತೂ ಮತ್ತೆ ಈ ರೀತಿ ಎಲ್ಲ ಜೀವಿಗಳನ್ನ ನಾಶಮಾಡಲ್ಲ.+
-
-
ಅರಣ್ಯಕಾಂಡ 15:2, 3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನಾನು ನಿಮಗೆ ಕೊಡೋ ದೇಶಕ್ಕೆ+ ಹೋದ್ಮೇಲೆ 3 ಯೆಹೋವನಿಗೆ ದನ-ಹೋರಿ ಅಥವಾ ಆಡು-ಕುರಿಗಳನ್ನ ಸರ್ವಾಂಗಹೋಮ ಬಲಿಯಾಗಿ+ ವಿಶೇಷ ಹರಕೆ ತೀರಿಸೋ ಬಲಿಯಾಗಿ ಸ್ವಇಷ್ಟದ ಕಾಣಿಕೆಯಾಗಿ+ ಅಥವಾ ವರ್ಷದ ಬೇರೆಬೇರೆ ಕಾಲಗಳಲ್ಲಿ ಆಚರಿಸೋ ಹಬ್ಬಗಳಲ್ಲಿ+ ಬಲಿಯಾಗಿ ಬೆಂಕಿಯಲ್ಲಿ ಅರ್ಪಿಸಿ ಅದ್ರ ಸುವಾಸನೆಯಿಂದ ಯೆಹೋವನನ್ನ ಖುಷಿ* ಪಡಿಸೋಕೆ+ ಇಷ್ಟಪಟ್ರೆ
-