-
ಯಾಜಕಕಾಂಡ 5:11, 12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಎರಡು ಕಾಡುಪಾರಿವಾಳ ಅಥವಾ ಎರಡು ಪಾರಿವಾಳ ಮರಿ ತಗೊಳೋಕೆ ಹಣ ಇಲ್ಲದವರು ಏಫಾ ಅಳತೆಯ ಹತ್ತನೇ ಒಂದು ಭಾಗದಷ್ಟು*+ ನುಣ್ಣಗಿನ ಹಿಟ್ಟನ್ನ ಪಾಪಪರಿಹಾರಕ ಅರ್ಪಣೆಯಾಗಿ ಕೊಡೋಕೆ ತರಬೇಕು. ಇದು ಪಾಪಪರಿಹಾರಕ ಅರ್ಪಣೆ ಆಗಿರೋದ್ರಿಂದ ಅದಕ್ಕೆ ಎಣ್ಣೆ ಸೇರಿಸಬಾರದು, ಅದ್ರ ಮೇಲೆ ಸಾಂಬ್ರಾಣಿ ಇಡಬಾರದು. 12 ಅವನು ಆ ಹಿಟ್ಟನ್ನ ಪುರೋಹಿತನಿಗೆ ಕೊಡಬೇಕು. ಪುರೋಹಿತ ಅದ್ರಿಂದ ಒಂದು ಹಿಡಿತುಂಬ ತಗೊಂಡು ಯಜ್ಞವೇದಿ ಮೇಲೆ ಅರ್ಪಿಸಿದ ಯೆಹೋವನ ಅರ್ಪಣೆಗಳ ಮೇಲಿಟ್ಟು ಸುಡಬೇಕು. ಅದ್ರಿಂದ ಹೊಗೆ ಮೇಲೆ ಹೋಗಬೇಕು. ಇದು ಎಲ್ಲ ಹಿಟ್ಟನ್ನ ಅರ್ಪಿಸಿದ್ದಾರೆ ಅಂತ ಸೂಚಿಸುತ್ತೆ. ಇದು ಪಾಪಪರಿಹಾರಕ ಅರ್ಪಣೆ.
-
-
ಯಾಜಕಕಾಂಡ 6:25, 26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
25 “ಆರೋನನಿಗೆ, ಅವನ ಮಕ್ಕಳಿಗೆ ಹೀಗೆ ಹೇಳು: ‘ಪಾಪಪರಿಹಾರಕ ಬಲಿಯ ನಿಯಮಗಳು+ ಯಾವದಂದ್ರೆ, ಯೆಹೋವನ ಮುಂದೆ ಸರ್ವಾಂಗಹೋಮ ಬಲಿಯ ಪ್ರಾಣಿ ಕಡಿಯೋ ಜಾಗದಲ್ಲೇ+ ಪಾಪಪರಿಹಾರಕ ಬಲಿಯ ಪ್ರಾಣಿಯನ್ನೂ ಕಡಿಬೇಕು. ಈ ಪಾಪಪರಿಹಾರಕ ಬಲಿ ಅತಿ ಪವಿತ್ರವಾಗಿದೆ. 26 ಪಾಪಪರಿಹಾರಕ್ಕಾಗಿ ಆ ಪ್ರಾಣಿನ ಅರ್ಪಿಸೋ ಪುರೋಹಿತ ಅದ್ರ ಮಾಂಸ ತಿನ್ನಬೇಕು.+ ಇದನ್ನ ಪವಿತ್ರವಾದ ಒಂದು ಜಾಗದಲ್ಲಿ ಅಂದ್ರೆ ದೇವದರ್ಶನ ಡೇರೆಯ ಅಂಗಳದಲ್ಲಿ ತಿನ್ನಬೇಕು.+
-