12 ಇಸ್ರಾಯೇಲ್ಯರೇ, ನಿಮ್ಮ ದೇವರಾದ ಯೆಹೋವ ನಿಮ್ಮಿಂದ ಏನು ಕೇಳ್ಕೊಳ್ತಿದ್ದಾನೆ?+ ನಿಮ್ಮ ದೇವರಾದ ಯೆಹೋವನಿಗೆ ಭಯಪಡಬೇಕು,+ ಎಲ್ಲ ವಿಷ್ಯಗಳಲ್ಲಿ ಆತನು ಹೇಳೋ ದಾರೀಲೇ ನಡಿಬೇಕು,+ ಆತನನ್ನ ಪ್ರೀತಿಸಬೇಕು, ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ* ನಿಮ್ಮ ದೇವರಾದ ಯೆಹೋವನ ಸೇವೆ ಮಾಡಬೇಕು,+
13 ನಾನು ಇವತ್ತು ಕೊಡ್ತಿರೋ ಆಜ್ಞೆಗಳನ್ನ ನೀವು ಶ್ರದ್ಧೆಯಿಂದ ಪಾಲಿಸಿದ್ರೆ, ನಿಮ್ಮ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ* ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸಿ, ಆತನ ಸೇವೆ ಮಾಡಿದ್ರೆ+
6 ನಿಮ್ಮ ದೇವರಾದ ಯೆಹೋವ ನಿಮ್ಮ, ನಿಮ್ಮ ಮಕ್ಕಳ ಹೃದಯಗಳನ್ನ ಶುದ್ಧ ಮಾಡ್ತಾನೆ.*+ ಆಗ ನೀವು ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ* ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸ್ತೀರ, ಬದುಕಿ ಬಾಳ್ತೀರ.+