-
1 ಅರಸು 8:17-19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಇಸ್ರಾಯೇಲ್ ದೇವರಾದ ಯೆಹೋವನ ಹೆಸ್ರಿಗಾಗಿ ಒಂದು ಆಲಯ ಕಟ್ಟಬೇಕು ಅನ್ನೋದು ನನ್ನ ಅಪ್ಪ ದಾವೀದನ ದೊಡ್ಡ ಆಸೆ ಆಗಿತ್ತು.+ 18 ಯೆಹೋವ ನನ್ನ ಅಪ್ಪ ದಾವೀದನಿಗೆ ‘ನನ್ನ ಹೆಸ್ರಿಗಾಗಿ ಒಂದು ಆಲಯ ಕಟ್ಟಬೇಕು ಅನ್ನೋ ನಿನ್ನ ಮನದಾಳದ ಆಸೆ ಒಳ್ಳೇದೇ. 19 ಆದ್ರೆ ನೀನು ಆಲಯ ಕಟ್ಟಲ್ಲ. ನಿನಗೆ ಹುಟ್ಟೋ ನಿನ್ನ ಸ್ವಂತ ಮಗ ನನ್ನ ಹೆಸ್ರಿಗಾಗಿ ಒಂದು ಆಲಯ ಕಟ್ತಾನೆ’+ ಅಂತ ಹೇಳಿದ್ದನು.
-
-
1 ಪೂರ್ವಕಾಲವೃತ್ತಾಂತ 17:4-6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 “ಹೋಗಿ ನನ್ನ ಸೇವಕನಾದ ದಾವೀದನಿಗೆ ಹೀಗೆ ಹೇಳು: ‘ಯೆಹೋವ ಹೇಳೋದು ಏನಂದ್ರೆ “ನಾನು ವಾಸ ಮಾಡೋ ಮನೆಯನ್ನ ನೀನು ಕಟ್ಟಲ್ಲ.+ 5 ಇಸ್ರಾಯೇಲನ್ನ ಈಜಿಪ್ಟಿಂದ ಕರ್ಕೊಂಡು ಬಂದ ದಿನದಿಂದ ಇವತ್ತಿನ ತನಕ ನಾನು ಆಲಯದಲ್ಲಿ ಇರಲಿಲ್ಲ. ನಾನು ಯಾವಾಗ್ಲೂ ಒಂದು ಡೇರೆಯಿಂದ ಇನ್ನೊಂದು ಡೇರೆಗೆ, ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ* ಹೋಗ್ತಿದ್ದೆ.+ 6 ಆ ಎಲ್ಲ ಸಮಯದಲ್ಲಿ ನಾನು ಇಡೀ ಇಸ್ರಾಯೇಲ್ಯರ ಜೊತೆ ನಡಿತಿದ್ದೆ. ನನ್ನ ಜನ್ರನ್ನ ಇಸ್ರಾಯೇಲಿನ ಯಾವ ನ್ಯಾಯಾಧೀಶ ನೋಡ್ಕೊಬೇಕು ಅಂತ ನಾನೇ ಆರಿಸ್ತಿದ್ದೆ. ಆ ನ್ಯಾಯಾಧೀಶರಲ್ಲಿ ಯಾರ ಹತ್ರನಾದ್ರೂ ‘ನನಗಾಗಿ ದೇವದಾರು ಮರದಿಂದ ಒಂದು ಮನೆ ಕಟ್ಕೊಡಿ’ ಅಂತ ಕೇಳಿದ್ನಾ?”’
-