-
ನ್ಯಾಯಸ್ಥಾಪಕರು 6:32ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
32 ಆ ದಿನ ಯೋವಾಷ ಗಿದ್ಯೋನನನ್ನ ಯೆರುಬ್ಬಾಳ* ಅಂತ ಕರೆದು “ಬಾಳ ತನ್ನ ಪರವಾಗಿ ತಾನೇ ಮಾತಾಡ್ಲಿ, ಕೆಡವಿ ಹಾಕಿರೋದು ಅವನ ಯಜ್ಞವೇದಿನ ತಾನೇ?” ಅಂದ.
-
-
ನ್ಯಾಯಸ್ಥಾಪಕರು 7:1ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಆಮೇಲೆ ಯೆರುಬ್ಬಾಳ ಅಂದ್ರೆ ಗಿದ್ಯೋನ+ ಮತ್ತು ಎಲ್ಲ ಜನ ಬೆಳಿಗ್ಗೆ ಬೇಗ ಎದ್ದು ಹರೋದಿನ ಬುಗ್ಗೆ ಹತ್ರ ಪಾಳೆಯ ಹೂಡಿದ್ರು. ಅದೇ ಸಮಯದಲ್ಲಿ ಗಿದ್ಯೋನನ ಪಾಳೆಯದ ಉತ್ತರಕ್ಕಿದ್ದ ಮೋರೆ ಬೆಟ್ಟದ ಕಣಿವೆ ಬಯಲಲ್ಲಿ ಮಿದ್ಯಾನ್ಯರು ಪಾಳೆಯ ಹೂಡಿದ್ದರು.
-
-
ನ್ಯಾಯಸ್ಥಾಪಕರು 9:50-53ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
50 ಆಮೇಲೆ ಅಬೀಮೆಲೆಕ ತೇಬೇಚಿಗೆ ಹೋಗಿ ಅದ್ರ ವಿರುದ್ಧ ಯುದ್ಧ ಮಾಡಿ ಅದನ್ನ ವಶ ಮಾಡ್ಕೊಂಡ. 51 ಆ ಪಟ್ಟಣದ ಮಧ್ಯದಲ್ಲಿ ಭದ್ರವಾದ ಒಂದು ಕೋಟೆ ಇತ್ತು. ಎಲ್ಲ ಸ್ತ್ರೀಪುರುಷರು, ಪಟ್ಟಣದ ಎಲ್ಲ ನಾಯಕರು ಓಡಿಹೋಗಿ ಅದ್ರೊಳಗೆ ಸೇರ್ಕೊಂಡು ಅದ್ರ ಮಾಳಿಗೆಗೆ ಹತ್ತಿಹೋದ್ರು. 52 ಅಬೀಮೆಲೆಕ ಕೋಟೆ ಕಡೆ ಹೋಗಿ ಅದ್ರ ಮೇಲೆ ದಾಳಿ ಮಾಡಿದ. ಅದನ್ನ ಬೆಂಕಿಯಿಂದ ಸುಟ್ಟುಹಾಕೋಕೆ ಅದ್ರ ಬಾಗಿಲಿಗೆ ಹೋದ. 53 ಆಗ ಸ್ತ್ರೀಯೊಬ್ಬಳು ಬೀಸೋ ಕಲ್ಲನ್ನ ಮೇಲಿಂದ ಎತ್ತಿಹಾಕಿ ಅಬೀಮೆಲೆಕನ ತಲೆಬುರುಡೆ ಒಡೆದಳು.+
-