-
1 ಅರಸು 16:15-19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ಯೆಹೂದದ ರಾಜ ಆಸನ ಆಳ್ವಿಕೆಯ 27ನೇ ವರ್ಷದಲ್ಲಿ ಜಿಮ್ರಿ ರಾಜನಾಗಿ ಏಳು ದಿನಗಳ ತನಕ ತಿರ್ಚದಲ್ಲಿ ಆಳಿದ. ಆ ಸಮಯದಲ್ಲಿ ಸೈನಿಕರ ಗುಂಪು ಫಿಲಿಷ್ಟಿಯರಿಗೆ ಸೇರಿದ ಗಿಬ್ಬೆತೋನಿನ+ ವಿರುದ್ಧ ಪಾಳೆಯ ಹೂಡಿತ್ತು. 16 “ಜಿಮ್ರಿ ಸಂಚು ಮಾಡಿ ರಾಜನನ್ನ ಕೊಂದ” ಅನ್ನೋ ಸುದ್ದಿ ಆ ಸೈನಿಕರ ಕಿವಿಗೆ ಬಿತ್ತು. ಆಗ ಎಲ್ಲ ಇಸ್ರಾಯೇಲ್ಯರು ಸೇರಿ ಸೇನಾಪತಿ ಒಮ್ರಿನ+ ಅದೇ ದಿನ ಪಾಳೆಯದಲ್ಲಿ ಇಸ್ರಾಯೇಲ್ ರಾಜನಾಗಿ ಮಾಡಿದ್ರು. 17 ಒಮ್ರಿ ಮತ್ತು ಅವನ ಜೊತೆ ಇದ್ದ ಎಲ್ಲ ಇಸ್ರಾಯೇಲ್ಯರು ಗಿಬ್ಬೆತೋನಿನಿಂದ ಹೊರಟು ತಿರ್ಚಗೆ ಮುತ್ತಿಗೆ ಹಾಕಿದ್ರು. 18 ಪಟ್ಟಣಕ್ಕೆ ಮುತ್ತಿಗೆ ಹಾಕಿರೋದನ್ನ ನೋಡಿದ ಜಿಮ್ರಿ ರಾಜನ ಅರಮನೆಯ ಭದ್ರ ಕೋಟೆಗೆ ಹೋಗಿ ಅದಕ್ಕೆ ಬೆಂಕಿ ಹಚ್ಚಿ, ಆ ಬೆಂಕಿಯಲ್ಲಿ ಅವನೂ ಸತ್ತ.+ 19 ಜಿಮ್ರಿ ಯಾರೊಬ್ಬಾಮನ ತರಾನೇ ನಡ್ಕೊಂಡು ಯೆಹೋವನ ದೃಷ್ಟಿಯಲ್ಲಿ ಕೆಟ್ಟದನ್ನೇ ಮಾಡಿ ಪಾಪ ಮಾಡಿದ. ಅಷ್ಟೇ ಅಲ್ಲ ಇಸ್ರಾಯೇಲ್ಯರೂ ಪಾಪ ಮಾಡೋ ಹಾಗೆ ಮಾಡಿದ.+ ಅದಕ್ಕೇ ಅವನಿಗೆ ಈ ಗತಿ ಬಂತು.
-