-
ಧರ್ಮೋಪದೇಶಕಾಂಡ 3:13-16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ಗಿಲ್ಯಾದಿನ ಉಳಿದ ಪ್ರದೇಶವನ್ನ ಓಗನ ರಾಜ್ಯವಾಗಿದ್ದ ಇಡೀ ಬಾಷಾನನ್ನ ಮನಸ್ಸೆ ಕುಲದ ಅರ್ಧ ಜನ್ರಿಗೆ ಕೊಟ್ಟೆ.+ ಬಾಷಾನಿಗೆ ಸೇರಿದ ಇಡೀ ಅರ್ಗೋಬ್ ಪ್ರದೇಶಕ್ಕೆ ರೆಫಾಯರ ದೇಶ ಅನ್ನೋ ಹೆಸ್ರಿತ್ತು.
14 ಮನಸ್ಸೆಯ ಕುಲದವನಾದ ಯಾಯೀರ+ ಗೆಷೂರ್ಯರ, ಮಾಕಾತ್ಯರ+ ಗಡಿ ತನಕ ಇದ್ದ ಇಡೀ ಅರ್ಗೋಬ್+ ಪ್ರದೇಶನ ವಶ ಮಾಡ್ಕೊಂಡ. ಬಾಷಾನಿನ ಆ ಹಳ್ಳಿಗಳಿಗೆ ತನ್ನ ಹೆಸ್ರನ್ನೇ ಇಟ್ಟು ಹವತ್-ಯಾಯೀರ್*+ ಅಂತ ಕರೆದ. ಇವತ್ತಿನ ತನಕ ಆ ಹಳ್ಳಿಗಳಿಗೆ ಅದೇ ಹೆಸ್ರಿದೆ. 15 ನಾನು ಮಾಕೀರನಿಗೆ ಗಿಲ್ಯಾದನ್ನ ಕೊಟ್ಟೆ.+ 16 ಅಷ್ಟೇ ಅಲ್ಲ ನಾನು ರೂಬೇನ್ಯರಿಗೆ ಗಾದ್ಯರಿಗೆ+ ಕೊಟ್ಟಿರೋ ಪ್ರದೇಶ ಗಿಲ್ಯಾದಿಂದ ಹಿಡಿದು ಅರ್ನೋನ್ ಕಣಿವೆ ತನಕ, (ಕಣಿವೆಯ ಮಧ್ಯಭಾಗ ತನಕ ಅದ್ರ ಗಡಿ ಇದೆ) ಯಬ್ಬೋಕ್ ಕಣಿವೆ ತನಕ, (ಇದು ಅಮ್ಮೋನಿಯರ ದೇಶದ ಗಡಿ)
-
-
ಧರ್ಮೋಪದೇಶಕಾಂಡ 28:63ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
63 ಈಗ ಯೆಹೋವ ನಿಮ್ಮ ಸಂಖ್ಯೆಯನ್ನ ಖುಷಿಯಿಂದ ಜಾಸ್ತಿ ಮಾಡಿದ ಹಾಗೇ ಆಗ ಯೆಹೋವ ಖುಷಿಯಿಂದಾನೇ ನಿಮ್ಮನ್ನ ಪೂರ್ತಿ ನಾಶ ಮಾಡ್ತಾನೆ. ನೀವು ವಶ ಮಾಡ್ಕೊಳ್ಳೋ ದೇಶದಿಂದ ನಿಮ್ಮನ್ನ ಕಿತ್ತುಹಾಕ್ತಾನೆ.
-
-
ಯೆಹೋಶುವ 13:8-12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಮನಸ್ಸೆ ಕುಲದ ಉಳಿದ ಅರ್ಧ ಜನ್ರಿಗೆ, ರೂಬೇನ್ಯರಿಗೆ, ಗಾದ್ಯರಿಗೆ ಮೋಶೆ ಯೋರ್ದನಿನ ಪೂರ್ವದ ಕಡೆ ಕೊಟ್ಟಿದ್ದ ಆಸ್ತಿನ ಅವರು ತಗೊಂಡ್ರು. ಯೆಹೋವನ ಸೇವಕ ಮೋಶೆ ಅವರಿಗೆ ಕೊಟ್ಟಿದ್ದ ಪ್ರದೇಶಗಳು ಯಾವುದಂದ್ರೆ:+ 9 ಅರ್ನೋನ್ ಕಣಿವೆಯ+ ಅಂಚಲ್ಲಿದ್ದ ಅರೋಯೇರಿನಿಂದ+ ಕಣಿವೆಯ ಮಧ್ಯದಲ್ಲಿದ್ದ ಪಟ್ಟಣನೂ ಸೇರಿ, ದೀಬೋನಿನ ತನಕ ವಿಸ್ತರಿಸಿರೋ ಮೇದೆಬದ ಪ್ರಸ್ಥಭೂಮಿ ತನಕ* ಇರೋ ಎಲ್ಲ ಪ್ರದೇಶಗಳು, 10 ಹೆಷ್ಬೋನಲ್ಲಿ ಆಳ್ತಿದ್ದ ಅಮೋರಿಯರ ರಾಜ ಸೀಹೋನನ ಎಲ್ಲ ಪಟ್ಟಣಗಳು, ಇವು ಅಮ್ಮೋನಿಯರ ಗಡಿ ತನಕ ಇತ್ತು.+ 11 ಅಷ್ಟೇ ಅಲ್ಲ ಗಿಲ್ಯಾದ್, ಗೆಷೂರ್ಯರ ಮತ್ತು ಮಾಕಾತ್ಯರ+ ಪ್ರದೇಶಗಳು, ಇಡೀ ಹೆರ್ಮೋನ್ ಬೆಟ್ಟ ಹಾಗೂ ಸಲ್ಕಾ+ ತನಕ ಇರೋ ಬಾಷಾನಿನ ಎಲ್ಲ ಪ್ರದೇಶಗಳು,+ 12 ಅಷ್ಟರೋತ್ ಮತ್ತು ಎದ್ರೈಯಲ್ಲಿ ಆಳ್ತಿದ್ದ ಬಾಷಾನಿನ ರಾಜ ಓಗನ ಇಡೀ ಸಾಮ್ರಾಜ್ಯ. (ಇವನು ರೆಫಾಯರ ಕೊನೆಯವ್ರಲ್ಲಿ ಒಬ್ಬ.)+ ಮೋಶೆ ಇವ್ರನ್ನ ಸೋಲಿಸಿ ಆ ಪ್ರದೇಶಗಳಿಂದ ಓಡಿಸಿಬಿಟ್ಟ.*+
-