-
2 ಪೂರ್ವಕಾಲವೃತ್ತಾಂತ 24:18, 19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
18 ಅವರು ತಮ್ಮ ಪೂರ್ವಜರ ದೇವರಾದ ಯೆಹೋವನ ಆಲಯವನ್ನ ಬಿಟ್ಟು ಪೂಜಾಕಂಬಗಳನ್ನ,* ಮೂರ್ತಿಗಳನ್ನ ಆರಾಧಿಸೋಕೆ ಶುರುಮಾಡಿದ್ರು. ಅವ್ರ ಈ ತಪ್ಪಿಂದಾಗಿ ಯೆಹೂದ ಮತ್ತು ಯೆರೂಸಲೇಮಿನ ಮೇಲೆ ದೇವರಿಗೆ ತುಂಬ ಕೋಪ ಬಂತು. 19 ಯೆಹೋವ ಅವ್ರನ್ನ ಮತ್ತೆ ತನ್ನ ಹತ್ರ ವಾಪಸ್ ಕರ್ಕೊಂಡು ಬರೋಕೆ ಪ್ರವಾದಿಗಳನ್ನ ಕಳಿಸ್ತಾನೇ ಇದ್ದನು ಮತ್ತು ಆ ಪ್ರವಾದಿಗಳ ಮೂಲಕ ಅವರನ್ನ ಎಚ್ಚರಿಸ್ತಾ* ಇದ್ದನು. ಆದ್ರೆ ಅವರು ಆತನ ಮಾತನ್ನ ಕಿವಿಗೆ ಹಾಕೊಳ್ಳಲಿಲ್ಲ.+
-
-
2 ಪೂರ್ವಕಾಲವೃತ್ತಾಂತ 36:15, 16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ಅವ್ರ ಪೂರ್ವಜರ ದೇವರಾದ ಯೆಹೋವ ಸಂದೇಶವಾಹಕರ ಮೂಲಕ ಅವ್ರಿಗೆ ಎಚ್ಚರಿಕೆಯನ್ನ ಕೊಡ್ತಾ ಇದ್ದ. ಆತನಿಗೆ ತನ್ನ ಜನ್ರ ಮೇಲೆ ಮತ್ತು ತನ್ನ ನಿವಾಸದ ಮೇಲೆ ಕನಿಕರ ಇದ್ದಿದ್ರಿಂದ ಆತನು ಅವ್ರನ್ನ ಪದೇಪದೇ ಎಚ್ಚರಿಸಿದ. 16 ಆದರೆ ಅವರು ಸತ್ಯ ದೇವರ ಸಂದೇಶವಾಹಕರನ್ನ ಹೀಯಾಳಿಸ್ತಾ ಇದ್ರು.+ ಅವರು ಆತನ ಮಾತುಗಳನ್ನ ತುಚ್ಛವಾಗಿ ಕಂಡ್ರು.+ ಆತನ ಪ್ರವಾದಿಗಳನ್ನ ಗೇಲಿಮಾಡಿದ್ರು.+ ಯೆಹೋವನ ಕೋಪ ಆತನ ಜನ್ರ ಮೇಲೆ ಬರೋ ತನಕ+ ಸನ್ನಿವೇಶ ಕೈಮೀರಿ ಹೋಗೋ ತನಕ ಅವರು ಹೀಗೇ ಮಾಡಿದ್ರು.
-