24ಯೆಹೋಯಾಕೀಮನ ಕಾಲದಲ್ಲಿ ಬಾಬೆಲಿನ ರಾಜ ನೆಬೂಕದ್ನೆಚ್ಚರ+ ಯೆಹೂದದ ಮೇಲೆ ದಾಳಿ ಮಾಡಿದ. ಯೆಹೋಯಾಕೀಮ ಮೂರು ವರ್ಷ ಅವನ ಅಧೀನದಲ್ಲಿದ್ದ. ಆಮೇಲೆ ಅವನು ನೆಬೂಕದ್ನೆಚ್ಚರನ ವಿರುದ್ಧ ತಿರುಗಿಬಿದ್ದ.
25ಚಿದ್ಕೀಯ ಆಳ್ತಿದ್ದ ಒಂಬತ್ತನೇ ವರ್ಷದ ಹತ್ತನೇ ತಿಂಗಳಿನ ಹತ್ತನೇ ದಿನದಲ್ಲಿ ಬಾಬೆಲಿನ ರಾಜ ನೆಬೂಕದ್ನೆಚ್ಚರ+ ತನ್ನೆಲ್ಲ ಸೈನ್ಯದ ಜೊತೆ ಯೆರೂಸಲೇಮಿನ ಮೇಲೆ ದಾಳಿ ಮಾಡೋಕೆ ಬಂದ.+ ಅವ್ರೆಲ್ಲ ಅದ್ರ ಮುಂದೆ ಪಾಳೆಯ ಹೂಡಿ ಅದ್ರ ಸುತ್ತಲೂ ಇಳಿಜಾರು ದಿಬ್ಬ ಕಟ್ಟಿದ್ರು.+
25ಅದು ಯೋಷೀಯನ ಮಗ ಯೆಹೂದದ ರಾಜ ಯೆಹೋಯಾಕೀಮ+ ಆಳ್ತಿದ್ದ ನಾಲ್ಕನೇ ವರ್ಷ ಆಗಿತ್ತು, ಬಾಬೆಲಿನ ರಾಜ ನೆಬೂಕದ್ನೆಚ್ಚರನ* ಆಳ್ವಿಕೆಯ ಮೊದಲನೇ ವರ್ಷ ಆಗಿತ್ತು. ಆಗ ದೇವರು ಯೆಹೂದದ ಎಲ್ಲ ಜನ್ರ ಬಗ್ಗೆ ಯೆರೆಮೀಯನಿಗೆ ಒಂದು ಸಂದೇಶ ಕೊಟ್ಟನು.