-
ಅ. ಕಾರ್ಯ 1:16-20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 “ಸಹೋದರರೇ, ಯೂದನ ಬಗ್ಗೆ ಪವಿತ್ರಶಕ್ತಿಯಿಂದ ದಾವೀದ ಮೊದಲೇ ಹೇಳಿದ್ದ. ಪವಿತ್ರಗ್ರಂಥದಲ್ಲಿ ಹೇಳಿದ ಆ ಮಾತು ನಿಜ ಆಗಲೇಬೇಕಿತ್ತು.+ ಹಾಗಾಗಿ ಈ ಯೂದ ಯೇಸುವನ್ನ ಹಿಡಿಯೋಕೆ ಬಂದವ್ರಿಗೆ ದಾರಿ ತೋರಿಸಿದ.+ 17 ಅವನು ನಮ್ಮ ಒಬ್ಬ ಸದಸ್ಯನಾಗಿದ್ದ.+ ನಮ್ಮ ಹಾಗೆ ಸೇವೆ ಮಾಡಿದ. 18 (ಈ ಮನುಷ್ಯನೇ ಅನ್ಯಾಯದ ಹಣದಲ್ಲಿ ಒಂದು ಹೊಲ ತಗೊಂಡ.+ ಅವನು ತಲೆಕೆಳಗಾಗಿ ಬಿದ್ದು ಹೊಟ್ಟೆ ಒಡೆದು ಕರುಳೆಲ್ಲ ಹೊರಗೆ ಬಂತು.+ 19 ಈ ವಿಷ್ಯ ಯೆರೂಸಲೇಮಿನ ಜನ್ರಿಗೆಲ್ಲ ಗೊತ್ತಾಯ್ತು. ಹಾಗಾಗಿ ಆ ಹೊಲಕ್ಕೆ ಅವ್ರ ಭಾಷೆಯಲ್ಲಿ ಆಕೆಲ್ದಮಾ ಅಂದ್ರೆ “ರಕ್ತದ ಹೊಲ” ಅನ್ನೋ ಹೆಸ್ರು ಬಂತು.) 20 ಕೀರ್ತನೆ ಪುಸ್ತಕದಲ್ಲಿ ‘ಅವನ ಮನೆ ಹಾಳುಬೀಳಲಿ, ಅಲ್ಲಿ ಯಾರೂ ವಾಸ ಮಾಡದಿರಲಿ’+ ಮತ್ತು ‘ಅವನ ಸ್ಥಾನವನ್ನ ಇನ್ನೊಬ್ಬ ಕಿತ್ಕೊಳ್ಳಲಿ’ ಅಂತ ಬರೆದಿದೆ.+
-