7 ನಿಮ್ಮ ದೇವರಾದ ಯೆಹೋವ ಕೊಡೋ ದೇಶದ ಯಾವುದಾದ್ರೂ ಒಂದು ಪಟ್ಟಣದಲ್ಲಿ ನಿಮ್ಮ ಸಹೋದರನೊಬ್ಬ ಬಡವನಾದ್ರೆ ಅವನ ಜೊತೆ ನೀವು ಕಲ್ಲು ಹೃದಯದವನ ತರ ನಡ್ಕೊಬಾರದು, ಜಿಪುಣತನ ತೋರಿಸಬಾರದು.+ 8 ನೀವು ಕೈಬಿಚ್ಚಿ ಉದಾರವಾಗಿ ಕೊಡಬೇಕು.+ ಅವನಿಗೆ ಅಗತ್ಯ ಇರೋದನ್ನ ಅಥವಾ ಅವನ ಹತ್ರ ಇಲ್ಲದಿರೋದನ್ನ ಅವನಿಗೆ ಸಾಲವಾಗಿ ಕೊಡೋಕೆ ಹಿಂದೆಮುಂದೆ ನೋಡಬಾರದು.