17 ಆಮೇಲೆ ಅಹೀತೋಫೆಲ ಅಬ್ಷಾಲೋಮನಿಗೆ “ನಾನು 12,000 ಗಂಡಸ್ರನ್ನ ಆರಿಸ್ಕೊಂಡು, ಇವತ್ತು ರಾತ್ರಿನೇ ದಾವೀದನ ಹಿಂದೆ ಹೋಗೋಕೆ ದಯವಿಟ್ಟು ಅನುಮತಿ ಕೊಡು. 2 ದಾವೀದ ದಣಿದಾಗ, ಬಲ ಕಳ್ಕೊಂಡಾಗ+ ನಾನು ಅವನ ಮೇಲೆ ದಾಳಿ ಮಾಡಿ ಭಯಪಡಿಸ್ತೀನಿ. ಆಗ ರಾಜನ ಜೊತೆ ಇರೋ ಜನ್ರೆಲ್ಲ ಅವನನ್ನ ಬಿಟ್ಟು ಓಡಿಹೋಗ್ತಾರೆ. ಆಮೇಲೆ ಅವನನ್ನ ಸಾಯಿಸ್ತೀನಿ.+