-
ಆದಿಕಾಂಡ 33:12-14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ಆಮೇಲೆ ಏಸಾವ “ಬಾ, ನಾವು ಪ್ರಯಾಣ ಮುಂದುವರಿಸೋಣ. ನಾನು ನಿನ್ನ ಮುಂದೆ ಮುಂದೆ ಹೋಗ್ತಾ ಇರ್ತಿನಿ” ಅಂದ. 13 ಆದ್ರೆ ಯಾಕೋಬ “ಸ್ವಾಮಿ, ನನ್ನ ಮಕ್ಕಳು ತುಂಬ ಚಿಕ್ಕವರು.+ ಅಲ್ಲದೆ ನನ್ನ ಹತ್ರ ಇರೋ ಕುರಿಗಳಿಗೆ ಮರಿಗಳಿವೆ, ದನಗಳಿಗೆ ಕರುಗಳಿವೆ. ಒಂದೇ ಒಂದು ದಿನ ಅವುಗಳನ್ನ ಬೇಗ ಬೇಗ ಓಡಿಸ್ಕೊಂಡು ಬಂದ್ರೂ ಇಡೀ ಹಿಂಡು ಸತ್ತು ಹೋಗುತ್ತೆ. 14 ಹಾಗಾಗಿ ಸ್ವಾಮಿ ದಯವಿಟ್ಟು ಈ ಸೇವಕನಿಗಿಂತ ಮುಂಚೆ ಪ್ರಯಾಣ ಬೆಳೆಸಬಹುದು. ನಾನು ನನ್ನ ಜೊತೆ ಇರೋ ಪ್ರಾಣಿಗಳ ನಡಿಗೆಗೆ ಮತ್ತು ನನ್ನ ಮಕ್ಕಳ ನಡಿಗೆಗೆ ಸರಿಯಾಗಿ ನಿಧಾನವಾಗಿ ನಡಿತಾ ನನ್ನ ಸ್ವಾಮಿ ವಾಸವಾಗಿರೋ ಸೇಯೀರಿಗೆ ಬರ್ತಿನಿ”+ ಅಂದ.
-
-
ವಿಮೋಚನಕಾಂಡ 23:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ನೀವು ಆರು ದಿನ ಕೆಲಸ ಮಾಡಬೇಕು. ಆದ್ರೆ ಏಳನೇ ದಿನ ನೀವು ಯಾವ ಕೆಲಸನೂ ಮಾಡಬಾರದು. ಇದ್ರಿಂದ ನಿಮ್ಮ ಹೋರಿ, ಕತ್ತೆಗೆ ವಿಶ್ರಾಂತಿ ಸಿಗುತ್ತೆ. ನಿಮ್ಮ ದಾಸರು, ವಿದೇಶಿಯರು ವಿಶ್ರಾಂತಿ ಪಡೆದು ಚೈತನ್ಯ ಪಡಿತಾರೆ.+
-
-
ಧರ್ಮೋಪದೇಶಕಾಂಡ 22:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ನಿಮ್ಮ ಸಹೋದರನ ಕತ್ತೆ ಅಥವಾ ಹೋರಿ ದಾರೀಲಿ ಬಿದ್ದಿರೋದಾದ್ರೆ ಅದನ್ನ ನೋಡಿನೂ ನೋಡದ ಹಾಗೆ ಹೋಗಬಾರದು. ಆ ಪ್ರಾಣಿನ ಎತ್ತೋಕೆ ಅವನಿಗೆ ಸಹಾಯ ಮಾಡ್ಲೇಬೇಕು.+
-