-
1 ಸಮುವೇಲ 22:17, 18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಹೀಗೆ ಹೇಳ್ತಾ ರಾಜ ತನ್ನ ಸುತ್ತ ನಿಂತಿದ್ದ ಸೈನಿಕರಿಗೆ* “ಹೋಗಿ, ಯೆಹೋವನ ಪುರೋಹಿತರನ್ನ ಸಾಯಿಸಿ. ಯಾಕಂದ್ರೆ ಅವರು ದಾವೀದನ ಪಕ್ಷ ವಹಿಸಿದ್ದಾರೆ! ದಾವೀದ ಓಡಿ ಹೋಗಿದ್ದಾನೆ ಅಂತ ಅವ್ರಿಗೆ ಗೊತ್ತಿತ್ತು. ಆದ್ರೂ ಅವರು ನನಗೆ ಅದನ್ನ ಹೇಳಲಿಲ್ಲ” ಅಂದ. ಆದ್ರೆ ರಾಜನ ಸೇವಕರು ಯೆಹೋವನ ಪುರೋಹಿತರನ್ನ ಸಾಯಿಸೋಕ್ಕೆ ಅವ್ರ ಮೇಲೆ ಕೈ ಎತ್ತೋಕೆ ಬಯಸಲಿಲ್ಲ. 18 ಆಗ ರಾಜ ದೋಯೇಗನಿಗೆ+ “ನೀನು ಹೋಗಿ ಆ ಪುರೋಹಿತರನ್ನ ಸಾಯಿಸು” ಅಂದ. ತಕ್ಷಣ ಎದೋಮ್ಯನಾದ+ ದೋಯೇಗ ಹೋಗಿ ಪುರೋಹಿತರನ್ನ ಸಾಯಿಸಿಬಿಟ್ಟ. ಅಂದು ಅವನು ನಾರಿನ ಏಫೋದನ್ನ ಹಾಕಿದ್ದ 85 ಗಂಡಸ್ರನ್ನ ಸಾಯಿಸಿದ.+
-
-
1 ಅರಸು 2:29ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
29 ರಾಜನಾದ ಸೊಲೊಮೋನನಿಗೆ “ಯೋವಾಬ ಯೆಹೋವನ ಡೇರೆಗೆ ಓಡಿಹೋಗಿ ಯಜ್ಞವೇದಿ ಹತ್ರ ನಿಂತಿದ್ದಾನೆ” ಅಂತ ಹೇಳಿದ್ರು. ಆಗ ಸೊಲೊಮೋನ ಯೆಹೋಯಾದನ ಮಗ ಬೆನಾಯನಿಗೆ “ಹೋಗು, ಅವನನ್ನ ಕೊಲ್ಲು” ಅಂತ ಆಜ್ಞೆ ಕೊಟ್ಟ.
-