-
ಧರ್ಮೋಪದೇಶಕಾಂಡ 1:16, 17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ಆ ಸಮಯದಲ್ಲಿ ನಿಮ್ಮ ನ್ಯಾಯಾಧೀಶರಿಗೆ ‘ಜನ್ರು ಸಮಸ್ಯೆ ಬಗೆಹರಿಸ್ಕೊಳ್ಳೋಕೆ ನಿಮ್ಮ ಹತ್ರ ಬಂದಾಗ ನ್ಯಾಯವಾಗಿ ತೀರ್ಪು ಮಾಡಬೇಕು.+ ಸಮಸ್ಯೆ ಇಬ್ರು ಇಸ್ರಾಯೇಲ್ಯರ ಮಧ್ಯ ಇರಲಿ ಅಥವಾ ಇಸ್ರಾಯೇಲ್ಯ ಮತ್ತು ವಿದೇಶಿ ಮಧ್ಯ ಇರಲಿ ನೀವು ನ್ಯಾಯವಾಗೇ ತೀರ್ಪು ಮಾಡಬೇಕು.+ 17 ವಿಚಾರಣೆ ಮಾಡುವಾಗ ಒಬ್ಬ ಪ್ರಸಿದ್ಧ ವ್ಯಕ್ತಿ ಮಾತಾಡಿದ್ರೆ ಹೇಗೆ ಕೇಳ್ತಿರೋ ಹಾಗೇ ಸಾಧಾರಣ ವ್ಯಕ್ತಿ ಮಾತಾಡಿದಾಗ್ಲೂ ಕೇಳಬೇಕು.+ ತೀರ್ಪು ಮಾಡುವಾಗ ಭೇದಭಾವ ಮಾಡಬಾರದು.+ ಮನುಷ್ಯರಿಗೆ ಹೆದರಿ ತೀರ್ಪು ಕೊಡಬಾರದು.+ ಯಾಕಂದ್ರೆ ನೀವು ದೇವರ ಪರವಾಗಿ ತೀರ್ಪು ಮಾಡ್ತಿದ್ದೀರ!+ ಯಾವುದಾದ್ರೂ ಸಮಸ್ಯೆ ಬಗೆಹರಿಸೋಕೆ ನಿಮ್ಮಿಂದ ಆಗದಿದ್ರೆ ನನ್ನ ಹತ್ರ ಬನ್ನಿ, ನಾನದನ್ನ ವಿಚಾರಿಸ್ತೀನಿ’ + ಅಂತ ಹೇಳ್ದೆ.
-
-
ಜ್ಞಾನೋಕ್ತಿ 28:21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಭೇದಭಾವ ಮಾಡೋದು ಒಳ್ಳೇದಲ್ಲ,+
ಆದ್ರೆ ಮನುಷ್ಯ ಒಂದು ತುಂಡು ರೊಟ್ಟಿಗಾಗಿ ತಪ್ಪು ಮಾಡಿಬಿಡಬಹುದು.
-