10 ಉದಾಹರಣೆಗೆ ‘ಅಪ್ಪಅಮ್ಮಗೆ ಗೌರವ ಕೊಡಬೇಕು’+ ಮತ್ತು ‘ಅಪ್ಪಅಮ್ಮನನ್ನ ಬೈಯುವವನನ್ನ ಸಾಯಿಸಬೇಕು’+ ಅಂತ ಮೋಶೆ ಹೇಳಿದ್ದಾನೆ. 11 ಆದ್ರೆ ಒಬ್ಬ ವ್ಯಕ್ತಿ ಅವನ ಅಪ್ಪಅಮ್ಮಗೆ ‘ನನ್ನ ಹತ್ರ ಇರೋದನ್ನೆಲ್ಲ ದೇವರಿಗೆ ಕಾಣಿಕೆಯಾಗಿ ಕೊಡಬೇಕಂತ ಇಟ್ಟಿದ್ದೀನಿ. ನಿಮಗೋಸ್ಕರ ನಾನು ಏನೂ ಮಾಡಕ್ಕಾಗಲ್ಲ’ ಅಂತ ಹೇಳಿದ್ರೆ ಅದನ್ನ ಸರಿ ಅಂತೀರ.