-
ಯೆರೆಮೀಯ 47:1ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
47 ಫರೋಹ ಗಾಜಾ ಪಟ್ಟಣ ಸೋಲಿಸೋ ಮುಂಚೆ ಫಿಲಿಷ್ಟಿಯರ+ ಬಗ್ಗೆ ಪ್ರವಾದಿ ಯೆರೆಮೀಯನಿಗೆ ಯೆಹೋವ ಹೇಳಿದ ಮಾತುಗಳು.
-
-
ಯೋವೇಲ 3:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ತೂರ್ ಮತ್ತು ಸೀದೋನೇ, ಫಿಲಿಷ್ಟಿಯದ ಎಲ್ಲ ಪ್ರದೇಶಗಳೇ,
ನಿಮಗೆಷ್ಟು ಧೈರ್ಯ? ನೀವು ನನಗೇ ಹೀಗೆ ಮಾಡಿದ್ದೀರಲ್ಲ?
ನೀವೇನು ನನಗೆ ಸೇಡು ತೀರಿಸ್ತಿದ್ದೀರಾ?
ನೀವು ನನಗೆ ಸೇಡು ತೀರಿಸ್ತಾ ಇದ್ರೆ ಅದನ್ನ ನಿಮ್ಮ ತಲೆ ಮೇಲೆನೇ ಬರೋ ತರ ಮಾಡ್ತೀನಿ.
ಅದು ತಕ್ಷಣ, ಬೇಗ ಬರೋ ತರ ಮಾಡ್ತೀನಿ.+
-
-
ಆಮೋಸ 1:6-8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಯೆಹೋವ ಹೀಗೆ ಹೇಳ್ತಾನೆ:
‘“ಗಾಜಾ ಪದೇಪದೇ* ದಂಗೆ ಎದ್ದಿದೆ,+ ಹಾಗಾಗಿ ಅದಕ್ಕೆ ಕೊಡಬೇಕಂತಿರೋ ಶಿಕ್ಷೆಯನ್ನ ನಾನು ತಪ್ಪಿಸೋದೇ ಇಲ್ಲ,
ಅವರು ಸೆರೆವಾಸಿಗಳನ್ನೆಲ್ಲ+ ಎದೋಮಿನ ಕೈಗೊಪ್ಪಿಸಿದ್ರು.
7 ಹಾಗಾಗಿ ನಾನು ಗಾಜಾದ+ ಗೋಡೆ ಮೇಲೆ ಬೆಂಕಿ ಕಳಿಸ್ತೀನಿ,
ಆ ಬೆಂಕಿ ಅದ್ರ ಭದ್ರ ಕೋಟೆಗಳನ್ನ ಸುಟ್ಟುಬಿಡುತ್ತೆ.
8 ನಾನು ಅಷ್ಡೋದಿನ+ ಜನ್ರನ್ನ, ಅಷ್ಕೆಲೋನಲ್ಲಿ+ ಆಳೋ ರಾಜನನ್ನ ನಾಶ ಮಾಡ್ತೀನಿ,
ಎಕ್ರೋನ್ ವಿರುದ್ಧ ನನ್ನ ಕೈ ಎತ್ತುತ್ತೀನಿ,+
ಫಿಲಿಷ್ಟಿಯರಲ್ಲಿ ಉಳಿದವರು ನಾಶವಾಗಿ ಹೋಗ್ತಾರೆ,”+
ಇದು ವಿಶ್ವದ ರಾಜ ಯೆಹೋವನ ಮಾತು.’
-
-
ಚೆಫನ್ಯ 2:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಯಾಕಂದ್ರೆ ಗಾಜಾ ಪಟ್ಟಣ ಖಾಲಿಖಾಲಿ ಹೊಡಿಯುತ್ತೆ,
ಅಷ್ಕೆಲೋನ್ ಹಾಳಾಗಿ ಹೋಗುತ್ತೆ.+
-
-
ಜೆಕರ್ಯ 9:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ಅಷ್ಕೆಲೋನ್ ಅದನ್ನ ನೋಡಿ ಹೆದರಿಹೋಗುತ್ತೆ,
ಗಾಜಾ ಸಂಕಟಪಡುತ್ತೆ,
ಎಕ್ರೋನಿನ ನಿರೀಕ್ಷೆ ನುಚ್ಚುನೂರಾಗೋದ್ರಿಂದ ಅದಕ್ಕೂ ಇದೇ ಸ್ಥಿತಿ ಬರುತ್ತೆ.
ಗಾಜಾದ ರಾಜ ಹೇಳಹೆಸ್ರಿಲ್ಲದ ಹಾಗೆ ನಾಶ ಆಗ್ತಾನೆ,
ಅಷ್ಕೆಲೋನ್ ನಿರ್ಜನವಾಗುತ್ತೆ.+
-