-
2 ಅರಸು 18:28-35ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
28 ಆಮೇಲೆ ರಬ್ಷಾಕೆ ಯೆಹೂದ್ಯರ ಭಾಷೆಯಲ್ಲಿ ಗಟ್ಟಿಯಾಗಿ ಕೂಗ್ತಾ “ಮಹಾ ಸಾಮ್ರಾಟ ಅಶ್ಶೂರ್ಯರ ರಾಜ ಹೇಳೋ ಈ ಸಂದೇಶ ಕೇಳಿ+ 29 ‘ರಾಜ ಹಿಜ್ಕೀಯನಿಂದ ಮೋಸ ಹೋಗಬೇಡಿ. ನನ್ನ ಕೈಯಿಂದ ನಿಮ್ಮನ್ನ ರಕ್ಷಿಸೋಕೆ ಅವನಿಗಾಗಲ್ಲ.+ 30 ಹಿಜ್ಕೀಯ ನಿಮಗೆ “ಯೆಹೋವ ಖಂಡಿತ ನಮ್ಮನ್ನ ಕಾಪಾಡ್ತಾನೆ. ಈ ಪಟ್ಟಣವನ್ನ ಅಶ್ಶೂರ್ಯರ ರಾಜನ ಕೈಗೆ ಒಪ್ಪಿಸಲ್ಲ”+ ಅಂತ ಹೇಳ್ತಾ ಯೆಹೋವನ ಮೇಲೆ ನಂಬಿಕೆ ಇಡೋ ತರ ಮಾಡ್ತಿದ್ದಾನೆ. ಆದ್ರೆ ಅವನನ್ನ ನಂಬಬೇಡಿ. 31 ಹಿಜ್ಕೀಯನ ಮಾತು ಕೇಳಬೇಡಿ. ಯಾಕಂದ್ರೆ ಅಶ್ಶೂರ್ಯರ ರಾಜ ಹೀಗೆ ಹೇಳ್ತಿದ್ದಾನೆ: “ನನ್ನ ಜೊತೆ ಶಾಂತಿ ಒಪ್ಪಂದ ಮಾಡ್ಕೊಂಡು ನನಗೆ ಶರಣಾಗಿ. ಆಗ ನಿಮ್ಮಲ್ಲಿ ಪ್ರತಿಯೊಬ್ರು ತಮ್ಮತಮ್ಮ ದ್ರಾಕ್ಷಿತೋಟದ ಮತ್ತು ಅಂಜೂರ ಮರದ ಹಣ್ಣು ತಿಂತೀರ. ಅಷ್ಟೇ ಅಲ್ಲ ನಿಮ್ಮ ಸ್ವಂತ ಬಾವಿ ನೀರು ಕುಡಿತೀರ. 32 ಆಮೇಲೆ ನಾನು ಬಂದು ನಿಮ್ಮನ್ನ ಒಂದು ದೇಶಕ್ಕೆ ಕರ್ಕೊಂಡು ಹೋಗ್ತೀನಿ.+ ಆ ದೇಶ ನಿಮ್ಮ ದೇಶದ ತರಾನೇ ಇರುತ್ತೆ. ಅಲ್ಲಿ ಧಾನ್ಯ, ಹೊಸ ದ್ರಾಕ್ಷಾಮದ್ಯ, ರೊಟ್ಟಿ, ದ್ರಾಕ್ಷಿತೋಟಗಳು, ಆಲಿವ್ ಮರಗಳು, ಜೇನುತುಪ್ಪ ಬೇಕಾದಷ್ಟು ಇರುತ್ತೆ. ಆಗ ನೀವು ನಮ್ಮ ಕೈಯಲ್ಲಿ ಸಾಯಲ್ಲ, ಬದುಕ್ತೀರ. ಹಿಜ್ಕೀಯನ ಮಾತು ಕೇಳಬೇಡಿ. ಯಾಕಂದ್ರೆ ಅವನು ‘ಯೆಹೋವ ನಮ್ಮನ್ನ ರಕ್ಷಿಸ್ತಾನೆ’ ಅಂತ ಹೇಳಿ ನಿಮಗೆ ಮೋಸ ಮಾಡ್ತಿದ್ದಾನೆ. 33 ಯಾವುದಾದ್ರೂ ದೇವರುಗಳಿಗೆ ಅಶ್ಶೂರ್ಯರ ರಾಜನ ಕೈಯಿಂದ ತಮ್ಮ ದೇಶಗಳನ್ನ ಸಂರಕ್ಷಿಸೋಕೆ ಆಗಿದ್ಯಾ? 34 ಹಾಮಾತಿನ+ ಮತ್ತು ಅರ್ಪಾದಿನ ದೇವರುಗಳು ಎಲ್ಲಿ? ಸೆಫರ್ವಯಿಮ್,+ ಹೇನ ಮತ್ತು ಇವ್ವಾ ಅನ್ನೋ ಪಟ್ಟಣಗಳ ದೇವರುಗಳು ಎಲ್ಲಿ? ಸಮಾರ್ಯವನ್ನ ನನ್ನ ಕೈಯಿಂದ ಆ ದೇವರುಗಳು ರಕ್ಷಿಸಿದ್ವಾ?+ 35 ಆ ದೇಶಗಳ ದೇವರುಗಳಲ್ಲಿ ಒಬ್ಬ ದೇವರಿಗಾದ್ರೂ ತನ್ನ ದೇಶವನ್ನ ನನ್ನ ಕೈಯಿಂದ ರಕ್ಷಿಸೋಕಾಯ್ತಾ? ಹಾಗಂದ ಮೇಲೆ ಯೆಹೋವ ಯೆರೂಸಲೇಮನ್ನ ನನ್ನ ಕೈಯಿಂದ ಹೇಗೆ ರಕ್ಷಿಸ್ತಾನೆ?”’”+ ಅಂದ.
-