1ಇವು ಯೆರೆಮೀಯನ* ಮಾತುಗಳು. ಇವನು ಹಿಲ್ಕೀಯನ ಮಗ. ಹಿಲ್ಕೀಯ ಬೆನ್ಯಾಮೀನ್ಯರ ಪ್ರದೇಶದ ಅನಾತೋತಲ್ಲಿ+ ವಾಸ ಇದ್ದ ಒಬ್ಬ ಪುರೋಹಿತ.*2 ಆಮೋನನ+ ಮಗನೂ ಯೆಹೂದದ ರಾಜನೂ ಆದ ಯೋಷೀಯನ+ ಆಳ್ವಿಕೆಯ 13ನೇ ವರ್ಷದಲ್ಲಿ ಯೆಹೋವ ತನ್ನ ಮಾತುಗಳನ್ನ ಯೆರೆಮೀಯನಿಗೆ ಹೇಳಿದನು.
3 “ಆಮೋನನ ಮಗ ಯೆಹೂದದ ರಾಜ ಯೋಷೀಯನ+ ಆಳ್ವಿಕೆಯ 13ನೇ ವರ್ಷದಿಂದ ಇವತ್ತಿನ ತನಕ ಅಂದ್ರೆ 23 ವರ್ಷಗಳಿಂದ ಯೆಹೋವ ನನಗೆ ಸಂದೇಶ ಕೊಟ್ಟನು. ನಾನು ಅವುಗಳನ್ನ ನಿಮಗೆ ಪದೇಪದೇ* ಹೇಳ್ತಾ ಇದ್ದೆ. ಆದ್ರೆ ನೀವು ಅದನ್ನ ಕಿವಿಗೆ ಹಾಕೊಳ್ಳಲೇ ಇಲ್ಲ.+