-
ಯೆರೆಮೀಯ 21:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ‘ಯೆಹೋವ ಹೇಳೋದು ಏನಂದ್ರೆ “ಯೆಹೂದದ ರಾಜ ಚಿದ್ಕೀಯನನ್ನ, ಅವನ ಸೇವಕರನ್ನ, ಅಂಟುರೋಗ, ಕತ್ತಿ, ಬರಗಾಲದಿಂದ ತಪ್ಪಿಸ್ಕೊಂಡು ಈ ಪಟ್ಟಣದಲ್ಲಿ ಬದುಕಿ ಉಳಿಯೋ ಜನ್ರನ್ನ ನಾನು ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನ* ಕೈಗೆ, ಅವ್ರ ಶತ್ರುಗಳ, ಅವ್ರ ಜೀವ ತೆಗಿಯೋಕೆ ಕಾಯ್ತಾ ಇರೋರ ಕೈಗೆ ಕೊಡ್ತೀನಿ.+ ಅವ್ರನ್ನ ಕತ್ತಿಯಿಂದ ಕೊಲ್ತೀನಿ. ಅವ್ರಿಗೆ ಸ್ವಲ್ಪನೂ ದಯೆ, ಅನುಕಂಪ, ಕರುಣೆ ತೋರಿಸಲ್ಲ.”’+
-
-
ಯೆರೆಮೀಯ 25:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ನಾನು ಉತ್ತರದ ಎಲ್ಲ ದೇಶಗಳನ್ನ,+ ಬಾಬೆಲಿನ ರಾಜನೂ ನನ್ನ ಸೇವಕನೂ ಆದ ನೆಬೂಕದ್ನೆಚ್ಚರನನ್ನ* ಕರಿತಿದ್ದೀನಿ”+ ಅಂತ ಯೆಹೋವ ಹೇಳ್ತಾನೆ. ಆತನು ಹೇಳೋದು ಏನಂದ್ರೆ “ಅವರು ಈ ದೇಶದ ಮೇಲೆ,+ ಇಲ್ಲಿನ ಜನ್ರ ಮೇಲೆ, ಸುತ್ತಮುತ್ತ ಇದ್ದ ಈ ಎಲ್ಲ ಜನ್ರ ಮೇಲೆ ದಾಳಿ ಮಾಡೋ ತರ ಮಾಡ್ತೀನಿ.+ ಈ ದೇಶವನ್ನ ಸುತ್ತಮುತ್ತ ಇದ್ದ ಬೇರೆ ದೇಶದ ಜನ್ರನ್ನ ನಾಶ ಮಾಡ್ತೀನಿ. ಇವುಗಳ ಪಾಡು ನೋಡಿದ ಎಲ್ಲ ಜನ್ರ ಎದೆ ಡವಡವ ಅಂತ ಹೊಡ್ಕೊಳ್ಳುತ್ತೆ, ಸೀಟಿ ಹೊಡೆದು ಅವಮಾನಿಸ್ತಾರೆ, ಇವು ಸದಾಕಾಲ ಹಾಳುಬಿದ್ದಿರುತ್ತೆ.
-