-
2 ಅರಸು 19:17-19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಯೆಹೋವನೇ, ಅಶ್ಶೂರ್ಯರ ರಾಜ ತುಂಬ ಜನಾಂಗಗಳನ್ನ, ಅವ್ರ ದೇಶಗಳನ್ನ ನಾಶ ಮಾಡಿರೋದು ನಿಜ.+ 18 ಅವರು ಆ ದೇಶದ ದೇವರುಗಳನ್ನ ಬೆಂಕಿಗೆ ಹಾಕಿದ್ರು. ಯಾಕಂದ್ರೆ ಅವು ದೇವರಲ್ಲ.+ ಕಟ್ಟಿಗೆಯಿಂದ, ಕಲ್ಲಿಂದ ಮಾಡಿದ ಮನುಷ್ಯರ ಕೈಕೆಲಸ ಅಷ್ಟೇ.+ ಅದಕ್ಕೆ ಆ ದೇವರುಗಳನ್ನ ನಾಶ ಮಾಡೋಕಾಯ್ತು. 19 ಹಾಗಾಗಿ ನಮ್ಮ ದೇವರಾದ ಯೆಹೋವನೇ, ದಯವಿಟ್ಟು ಅವನ ಕೈಯಿಂದ ನಮ್ಮನ್ನ ರಕ್ಷಿಸು. ಆಗ ಯೆಹೋವನೇ, ಭೂಮಿ ಮೇಲಿರೋ ಸಕಲ ರಾಜ್ಯಗಳಿಗೆ ನೀನೊಬ್ಬನೇ ದೇವರಂತ ಗೊತ್ತಾಗುತ್ತೆ.”+
-
-
ಕೀರ್ತನೆ 83:17, 18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಅವರು ಶಾಶ್ವತವಾಗಿ ನಾಚಿಕೆಪಡಲಿ, ಯಾವಾಗ್ಲೂ ಭಯಪಡಲಿ,
ಅವ್ರಿಗೆ ಅವಮಾನ ಆಗಲಿ, ನಾಶವಾಗಿ ಹೋಗಲಿ.
-
-
ಯೆಹೆಜ್ಕೇಲ 39:21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ‘ನಾನು ಜನಾಂಗಗಳಿಗೆ ನನ್ನ ಮಹಿಮೆಯನ್ನ ತೋರಿಸ್ತೀನಿ. ನಾನು ಎಲ್ಲ ಜನಾಂಗಗಳಿಗೆ ಕೊಟ್ಟಿರೋ ತೀರ್ಪನ್ನ ಹೇಗೆ ಜಾರಿ ಮಾಡಿದ್ದೀನಿ ಅಂತ ಮತ್ತು ನನ್ನ ಶಕ್ತಿಯನ್ನ ಹೇಗೆ ತೋರಿಸಿದ್ದೀನಿ ಅಂತ ಆ ಜನಾಂಗಗಳು ನೋಡುತ್ತೆ.+
-