-
ಯಾಜಕಕಾಂಡ 6:12, 13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ಯಜ್ಞವೇದಿ ಮೇಲಿನ ಬೆಂಕಿ ಆರಿಹೋಗಬಾರದು, ಉರಿತಾ ಇರಬೇಕು. ಪ್ರತಿದಿನ ಬೆಳಿಗ್ಗೆ ಪುರೋಹಿತ ಆ ಬೆಂಕಿ ಮೇಲೆ ಕಟ್ಟಿಗೆಗಳನ್ನ ಇಡಬೇಕು,+ ಅದ್ರ ಮೇಲೆ ಸರ್ವಾಂಗಹೋಮ ಬಲಿಯ ಪ್ರಾಣಿಯ ತುಂಡುಗಳನ್ನ ಜೋಡಿಸಿಡಬೇಕು. ಅದ್ರ ಮೇಲೆ ಸಮಾಧಾನ ಬಲಿಯ ಪ್ರಾಣಿಗಳ ಕೊಬ್ಬು ಇಟ್ಟು ಸುಡಬೇಕು. ಅದ್ರ ಹೊಗೆ ಮೇಲೆ ಹೋಗಬೇಕು.+ 13 ಯಜ್ಞವೇದಿ ಮೇಲೆ ಬೆಂಕಿ ಯಾವಾಗ್ಲೂ ಉರಿತಾ ಇರಬೇಕು, ಆರಿಹೋಗಬಾರದು.
-
-
2 ಪೂರ್ವಕಾಲವೃತ್ತಾಂತ 13:10, 11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಆದ್ರೆ ನಮಗೆ ಯೆಹೋವನೇ ದೇವರು.+ ನಾವು ಆತನನ್ನ ಬಿಟ್ಟಿಲ್ಲ. ಆರೋನನ ವಂಶದವರು ನಮ್ಮ ಪುರೋಹಿತರು. ಅವರು ಯೆಹೋವನ ಸೇವೆ ಮಾಡ್ತಾರೆ ಮತ್ತು ಲೇವಿಯರು ಅವ್ರಿಗೆ ಸಹಾಯ ಮಾಡ್ತಾರೆ. 11 ಅವರು ದಿನ ಬೆಳಿಗ್ಗೆ ಮತ್ತು ಸಂಜೆ ಯೆಹೋವನಿಗಾಗಿ ಸುಗಂಧ ಬೀರೋ ಧೂಪದ+ ಜೊತೆ ಸರ್ವಾಂಗಹೋಮ ಬಲಿಗಳನ್ನ ಕೊಡ್ತಾರೆ.+ ಅದ್ರ ಹೊಗೆ ಮೇಲೆ ಏರೋ ತರ ಮಾಡ್ತಾರೆ. ಅಪ್ಪಟ ಚಿನ್ನದಿಂದ ಮಾಡಿದ ಮೇಜಿನ ಮೇಲೆ ಅರ್ಪಣೆ ರೊಟ್ಟಿಗಳನ್ನ+ ಇಡ್ತಾರೆ. ಪ್ರತಿ ಸಂಜೆ ಚಿನ್ನದ ದೀಪಸ್ತಂಭವನ್ನ+ ಮತ್ತು ಅದ್ರ ದೀಪಗಳನ್ನ ಹಚ್ತಾರೆ.+ ಯಾಕಂದ್ರೆ ನಮ್ಮ ದೇವರಾದ ಯೆಹೋವನ ಕಡೆಗಿರೋ ನಮ್ಮ ಜವಾಬ್ದಾರಿನ ನಾವು ಮಾಡ್ತೀವಿ. ಆದ್ರೆ ನೀವು ಆತನನ್ನ ಬಿಟ್ಟುಬಿಟ್ಟಿದ್ದೀರ.
-