-
ಯೆಹೋಶುವ 2:17-19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಆ ಗೂಢಚಾರರು “ನಿನಗೆ ಮಾತು ಕೊಟ್ಟ ಹಾಗೆ ನಾವು ನಡೀಬೇಕಂದ್ರೆ,+ 18 ಈ ದೇಶಕ್ಕೆ ಮತ್ತೆ ಬರುವಾಗ ಈ ಕೆಂಪು ಹಗ್ಗನ ನಮ್ಮನ್ನ ಇಳಿಸ್ತಿರೋ ಈ ಕಿಟಕಿಗೆ ಕಟ್ಟಬೇಕು. ನಿನ್ನ ಅಪ್ಪಅಮ್ಮ, ಒಡಹುಟ್ಟಿದವರು, ಅವ್ರ ಇಡೀ ಕುಟುಂಬನ ನಿನ್ನ ಮನೇಲಿ ಸೇರಿಸಬೇಕು.+ 19 ಯಾರಾದ್ರೂ ನಿನ್ನ ಮನೆ ಬಿಟ್ಟು ಹೊರಗೆ ಹೋದ್ರೆ ಅವ್ರ ಸಾವಿಗೆ ಅವ್ರೇ ಕಾರಣ.* ಆಗ ಆ ಅಪರಾಧ ನಮ್ಮ ಮೇಲೆ ಬರಲ್ಲ. ಒಂದುವೇಳೆ ನಿನ್ನ ಮನೇಲಿದ್ದಾಗ ಅವ್ರಿಗೇನಾದ್ರೂ ಆದ್ರೆ ಅವ್ರ ಸಾವಿಗೆ ನಾವು ಕಾರಣ.
-