48 ಆಮೇಲೆ ರಾಜನು ದಾನಿಯೇಲನಿಗೆ ರಾಜ್ಯದಲ್ಲಿ ದೊಡ್ಡ ಸ್ಥಾನ ಕೊಟ್ಟ, ತುಂಬ ಅಮೂಲ್ಯ ಉಡುಗೊರೆಗಳನ್ನ ಕೊಟ್ಟ. ಅವನನ್ನ ಬಾಬೆಲಿನ ಇಡೀ ಪ್ರಾಂತ್ಯದ* ಮೇಲೆ ಅಧಿಕಾರಿಯಾಗಿ ನೇಮಿಸಿದ.+ ಬಾಬೆಲಿನ ಎಲ್ಲ ವಿವೇಕಿಗಳ ಮೇಲೆ ಮುಖ್ಯಾಧಿಕಾರಿಯಾಗಿ ಮಾಡಿದ.
29 ಆಮೇಲೆ ಬೇಲ್ಶಚ್ಚರನ ಅಪ್ಪಣೆ ತರ ದಾನಿಯೇಲನಿಗೆ ನೇರಳೆ ಬಣ್ಣದ* ಬಟ್ಟೆ ತೊಡಿಸಿದ್ರು. ಅವನಿಗೆ ಚಿನ್ನದ ಕಂಠಹಾರ ಹಾಕಿದ್ರು. ಅವನು ಇಡೀ ಸಾಮ್ರಾಜ್ಯದ ಮೂರನೇ ಮುಖ್ಯ ವ್ಯಕ್ತಿಯಾಗಿ ಆಳ್ತಾನೆ ಅಂತ ಘೋಷಣೆ ಆಯ್ತು.+