-
ಎಸ್ತೇರ್ 1:19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
19 ಹಾಗಾಗಿ ರಾಜನಿಗೆ ಸರಿ ಅನಿಸೋದಾದ್ರೆ ಅವನು ಒಂದು ರಾಜಾಜ್ಞೆ ಹೊರಡಿಸಬಹುದು. ಅದೇನಂದ್ರೆ ರಾಣಿ ವಷ್ಟಿ ಇನ್ನು ಯಾವತ್ತೂ ರಾಜ ಅಹಷ್ವೇರೋಷನ ಮುಂದೆ ಬರಬಾರದು. ಈ ರಾಜಾಜ್ಞೆ ಯಾವತ್ತೂ ರದ್ದಾಗದ+ ಹಾಗೆ ಅದನ್ನ ಮೇದ್ಯ ಮತ್ತು ಪರ್ಶಿಯರ ನಿಯಮಗಳಲ್ಲಿ ಸೇರಿಸಬಹುದು. ಅಷ್ಟೇ ಅಲ್ಲ ವಷ್ಟಿಯ ಸ್ಥಾನಕ್ಕೆ ಅವಳಿಗಿಂತ ಒಳ್ಳೇ ಹೊಸ ರಾಣಿಯನ್ನ ರಾಜ ಆರಿಸ್ಕೊಳ್ಳಬಹುದು.
-
-
ಎಸ್ತೇರ್ 8:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಈಗ ನೀವು ಯೆಹೂದ್ಯರಿಗೆ ಒಳಿತಾಗೋ ತರ ಏನು ಬರಿಬೇಕೋ ಅದನ್ನ ರಾಜನಾದ ನನ್ನ ಹೆಸ್ರಲ್ಲಿ ಬರೆದು ಅದ್ರ ಮೇಲೆ ರಾಜನ ಮುದ್ರೆ ಉಂಗುರ ಒತ್ತಿ. ಯಾಕಂದ್ರೆ ರಾಜನ ಹೆಸ್ರಲ್ಲಿ ಒಂದು ಆಜ್ಞೆ ಬರೆದು, ಅದ್ರ ಮೇಲೆ ರಾಜನ ಮುದ್ರೆ ಉಂಗುರ ಒತ್ತಿದ್ರೆ ಆ ಆಜ್ಞೆಯನ್ನ ಯಾವುದೇ ಕಾರಣಕ್ಕೂ ರದ್ದು ಮಾಡೋಕ್ಕಾಗಲ್ಲ”+ ಅಂದ.
-