25 ಅವನು ಸರ್ವೋನ್ನತನ ವಿರುದ್ಧ ಮಾತಾಡ್ತಾನೆ.+ ಮಹೋನ್ನತ ದೇವರ ಪವಿತ್ರ ಜನ್ರಿಗೆ ಕಿರುಕುಳ ಕೊಡ್ತಾ ಇರ್ತಾನೆ. ಅವನು ಕಾಲಗಳನ್ನ, ನಿಯಮವನ್ನ ಬದಲಾಯಿಸಬೇಕು ಅಂತ ನೆನಸ್ತಾನೆ. ಒಂದು ಕಾಲ, ಎರಡು ಕಾಲ, ಅರ್ಧ ಕಾಲದ* ತನಕ ಪವಿತ್ರ ಜನ್ರನ್ನ ಅವನ ಕೈಗೆ ಒಪ್ಪಿಸಲಾಗುತ್ತೆ.+
27 ಆಕಾಶದ ಕೆಳಗಿರೋ ಎಲ್ಲ ಸಾಮ್ರಾಜ್ಯಗಳನ್ನ, ಅವುಗಳ ಅಧಿಕಾರ, ವೈಭವವನ್ನ ಮಹೋನ್ನತ ದೇವರ ಪವಿತ್ರ ಜನ್ರಿಗೆ ಕೊಡಲಾಯ್ತು.+ ಅವ್ರ ಸಾಮ್ರಾಜ್ಯ ಶಾಶ್ವತವಾಗಿರುತ್ತೆ,+ ಎಲ್ಲ ಸಾಮ್ರಾಜ್ಯಗಳು ಅವ್ರ ಸೇವೆ ಮಾಡುತ್ತೆ, ಅವ್ರ ಆಜ್ಞೆಗಳನ್ನ ಪಾಲಿಸುತ್ತೆ.’