-
1 ಅರಸು 22:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಆಗ ಇಸ್ರಾಯೇಲ್ ರಾಜ ಸುಮಾರು 400 ಪ್ರವಾದಿಗಳನ್ನ ಸೇರಿಸಿ ಅವ್ರಿಗೆ “ರಾಮೋತ್-ಗಿಲ್ಯಾದಿನ ವಿರುದ್ಧ ನಾನು ಯುದ್ಧಕ್ಕೆ ಹೋಗ್ಲಾ ಬೇಡ್ವಾ?” ಅಂತ ಕೇಳಿದ. ಅದಕ್ಕೆ ಅವರು “ಯುದ್ಧಕ್ಕೆ ಹೋಗು. ಯೆಹೋವ ಅದನ್ನ ನಿನ್ನ ಕೈಗೆ ಒಪ್ಪಿಸ್ತಾನೆ” ಅಂದ್ರು.
-
-
1 ಅರಸು 22:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಅದಕ್ಕೆ ಇಸ್ರಾಯೇಲ್ ರಾಜ ಯೆಹೋಷಾಫಾಟನಿಗೆ “ಇನ್ನೂ ಒಬ್ಬ ಪ್ರವಾದಿ ಇದ್ದಾನೆ. ಅವನ ಮೂಲಕ ನಾವು ಯೆಹೋವನ ಹತ್ರ ಕೇಳಬಹುದು.+ ಆದ್ರೆ ನಾನು ಅವನನ್ನ ದ್ವೇಷಿಸ್ತೀನಿ.+ ಅವನು ಇಲ್ಲಿ ತನಕ ನನ್ನ ಬಗ್ಗೆ ಒಳ್ಳೇ ಭವಿಷ್ಯ ಹೇಳಿದ್ದೇ ಇಲ್ಲ. ಬರೀ ಕೆಟ್ಟದ್ದೇ ಹೇಳ್ತಾನೆ.+ ಅವನ ಹೆಸ್ರು ಮೀಕಾಯೆಹು. ಅವನು ಇಮ್ಲನ ಮಗ” ಅಂದ. ಹಾಗಿದ್ರೂ ಯೆಹೋಷಾಫಾಟ “ರಾಜ, ನೀನು ಹೀಗೆ ಮಾತಾಡಬಾರದು” ಅಂದ.
-