-
ಮಾರ್ಕ 7:8-13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ನೀವು ದೇವರ ಆಜ್ಞೆಗಳನ್ನ ಗಾಳಿಗೆ ತೂರಿ ಮನುಷ್ಯರ ಸಂಪ್ರದಾಯಗಳನ್ನ ಗಟ್ಟಿಯಾಗಿ ಹಿಡ್ಕೊಳ್ತೀರ.”+
9 ಆಮೇಲೆ ಅವ್ರಿಗೆ ಹೀಗಂದನು “ನೀವು ನಿಮ್ಮ ಸಂಪ್ರದಾಯ ಕಾಪಾಡ್ಕೊಳ್ಳೋಕೆ ದೇವರ ಆಜ್ಞೆನ ಪಕ್ಕಕ್ಕೆ ಇಡೋದು ಹೇಗೆ ಅಂತ ತುಂಬ ತಲೆ ಓಡಿಸ್ತೀರ.+ 10 ಉದಾಹರಣೆಗೆ ‘ಅಪ್ಪಅಮ್ಮಗೆ ಗೌರವ ಕೊಡಬೇಕು’+ ಮತ್ತು ‘ಅಪ್ಪಅಮ್ಮನನ್ನ ಬೈಯುವವನನ್ನ* ಸಾಯಿಸಬೇಕು’+ ಅಂತ ಮೋಶೆ ಹೇಳಿದ್ದಾನೆ. 11 ಆದ್ರೆ ಒಬ್ಬ ವ್ಯಕ್ತಿ ಅವನ ಅಪ್ಪಅಮ್ಮಗೆ ‘ನನ್ನ ಹತ್ರ ಇರೋದನ್ನೆಲ್ಲ ದೇವರಿಗೆ ಕಾಣಿಕೆಯಾಗಿ* ಕೊಡಬೇಕಂತ ಇಟ್ಟಿದ್ದೀನಿ. ನಿಮಗೋಸ್ಕರ ನಾನು ಏನೂ ಮಾಡಕ್ಕಾಗಲ್ಲ’ ಅಂತ ಹೇಳಿದ್ರೆ ಅದನ್ನ ಸರಿ ಅಂತೀರ. 12 ಆಮೇಲೆ ಅವನು ಅಪ್ಪಅಮ್ಮಗೆ ಯಾವ ಸಹಾಯ ಮಾಡೋಕೂ ನೀವು ಬಿಡಲ್ಲ.+ 13 ಹೀಗೆ ನಿಮ್ಮ ಸಂಪ್ರದಾಯಗಳನ್ನ ಉಳಿಸ್ಕೊಳ್ಳೋಕೆ ದೇವರ ಮಾತನ್ನ ತಳ್ಳಿಹಾಕ್ತೀರ.+ ಇಂಥದ್ದೇ ತುಂಬ ವಿಷ್ಯಗಳನ್ನ ಮಾಡ್ತೀರ.”+
-