-
ಮತ್ತಾಯ 14:15-21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ಸಂಜೆ ಆದಾಗ ಶಿಷ್ಯರು ಆತನ ಹತ್ರ ಬಂದು “ನಾವು ತುಂಬ ದೂರ ಬಂದುಬಿಟ್ಟಿದ್ದೀವಿ. ಈಗಾಗಲೇ ತುಂಬ ಹೊತ್ತಾಗಿದೆ. ಈ ಜನ್ರನ್ನ ಕಳಿಸಿಬಿಡು. ಅವರು ಅಕ್ಕಪಕ್ಕದ ಹಳ್ಳಿಗೆ ಹೋಗಿ ಏನಾದ್ರೂ ತಗೊಂಡು ತಿನ್ನಲಿ” ಅಂದ್ರು.+ 16 ಅದಕ್ಕೆ ಯೇಸು “ಅವರು ಹೋಗೋದು ಬೇಡ. ನೀವೇ ಏನಾದ್ರೂ ತಿನ್ನೋಕೆ ಕೊಡಿ” ಅಂದನು. 17 ಶಿಷ್ಯರು ಅದಕ್ಕೆ “ನಮ್ಮ ಹತ್ರ ಐದು ರೊಟ್ಟಿ, ಎರಡು ಮೀನು ಬಿಟ್ಟು ಬೇರೇನೂ ಇಲ್ಲ” ಅಂದ್ರು. 18 ಯೇಸು “ಅದನ್ನ ತಗೊಂಡು ಬನ್ನಿ” ಅಂದನು. 19 ಜನ್ರಿಗೆ ಹುಲ್ಲಿನ ಮೇಲೆ ಕೂರೋಕೆ ಹೇಳಿದನು. ಆ ಐದು ರೊಟ್ಟಿ, ಎರಡು ಮೀನನ್ನ ತಗೊಂಡು ಆಕಾಶದ ಕಡೆ ನೋಡಿ ಪ್ರಾರ್ಥಿಸಿ+ ರೊಟ್ಟಿಗಳನ್ನ ಮುರಿದು ಶಿಷ್ಯರಿಗೆ ಕೊಟ್ಟನು. ಅವರು ಜನ್ರಿಗೆ ಹಂಚಿದ್ರು. 20 ಎಲ್ರೂ ತೃಪ್ತಿ ಆಗುವಷ್ಟು ತಿಂದ್ರು. ಶಿಷ್ಯರು ಉಳಿದ ರೊಟ್ಟಿ ತುಂಡುಗಳನ್ನ ಕೂಡಿಸಿದಾಗ 12 ಬುಟ್ಟಿ ತುಂಬ್ತು.+ 21 ಅಲ್ಲಿ ಊಟ ಮಾಡಿದವ್ರಲ್ಲಿ ಗಂಡಸರೇ ಸುಮಾರು 5,000 ಇದ್ರು. ಹೆಂಗಸ್ರೂ ಮಕ್ಕಳೂ ಇದ್ರು.+
-
-
ಲೂಕ 9:12-17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ಸಂಜೆ ಆದಾಗ 12 ಶಿಷ್ಯರು ಬಂದು “ನಾವು ತುಂಬ ದೂರ ಬಂದುಬಿಟ್ಟಿದ್ದೀವಿ. ಈ ಜನ್ರನ್ನೆಲ್ಲ ಕಳಿಸಿಬಿಡು. ಅವರು ಅಕ್ಕಪಕ್ಕದ ಹಳ್ಳಿಗೆ ಹೋಗಿ ಛತ್ರದಲ್ಲಿ ಉಳ್ಕೊಳ್ತಾರೆ, ಏನಾದ್ರೂ ತಗೊಂಡು ತಿಂತಾರೆ” ಅಂದ್ರು.+ 13 ಆದ್ರೆ ಆತನು “ನೀವೇ ಅವ್ರಿಗೆ ಏನಾದ್ರೂ ತಿನ್ನೋಕೆ ಕೊಡಿ”+ ಅಂದನು. ಅದಕ್ಕೆ “ನಮ್ಮ ಹತ್ರ ಐದು ರೊಟ್ಟಿ ಎರಡು ಮೀನು ಬಿಟ್ಟು ಬೇರೇನೂ ಇಲ್ಲ. ನಾವು ಹೋಗಿ ಇವ್ರಿಗೆಲ್ಲ ಆಗೋಷ್ಟು ಊಟ ತರಬೇಕಾ?” ಅಂದ್ರು. 14 ಅಲ್ಲಿ ಗಂಡಸರೇ ಸುಮಾರು 5,000 ಜನ ಇದ್ರು. ಆತನು ಶಿಷ್ಯರಿಗೆ “ಅವ್ರನ್ನ 50-50 ಮಂದಿ ಇರೋ ತರ ಗುಂಪು ಮಾಡಿ ಕೂರಿಸಿ” ಅಂದನು. 15 ಅವರು ಹಾಗೇ ಕೂರಿಸಿದ್ರು. 16 ಆಮೇಲೆ ಯೇಸು ಐದು ರೊಟ್ಟಿ ಎರಡು ಮೀನು ತಗೊಂಡು ಆಕಾಶದ ಕಡೆ ನೋಡಿ ಪ್ರಾರ್ಥಿಸಿದನು. ರೊಟ್ಟಿ ಮುರಿದು ಶಿಷ್ಯರಿಗೆ ಕೊಟ್ಟು ಜನ್ರಿಗೆ ಹಂಚಿ ಅಂದನು. 17 ಎಲ್ರೂ ತೃಪ್ತಿ ಆಗುವಷ್ಟು ತಿಂದ್ರು. ಶಿಷ್ಯರು ಉಳಿದ ರೊಟ್ಟಿ ತುಂಡುಗಳನ್ನ ಕೂಡಿಸಿದಾಗ 12 ಬುಟ್ಟಿ ತುಂಬಿತು.+
-