-
ಮತ್ತಾಯ 9:10-13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಆಮೇಲೆ ಯೇಸು ಅವನ ಮನೆಯಲ್ಲಿ ಊಟಕ್ಕೆ ಕೂತಿದ್ದಾಗ ತೆರಿಗೆ ವಸೂಲಿ ಮಾಡುವವರು, ಪಾಪಿಗಳು ಬಂದು ಯೇಸು ಮತ್ತು ಶಿಷ್ಯರ ಜೊತೆ ಊಟಕ್ಕೆ ಕೂತರು.+ 11 ಇದನ್ನ ನೋಡಿ ಫರಿಸಾಯರು ಶಿಷ್ಯರಿಗೆ “ನಿಮ್ಮ ಗುರು ತೆರಿಗೆ ವಸೂಲಿ ಮಾಡುವವರ ಜೊತೆ, ಪಾಪಿಗಳ ಜೊತೆ ಯಾಕೆ ಊಟಮಾಡ್ತಾನೆ?”+ ಅಂತ ಕೇಳಿದ್ರು. 12 ಅದನ್ನ ಕೇಳಿಸ್ಕೊಂಡ ಯೇಸು “ಆರೋಗ್ಯವಾಗಿ ಇರೋರಿಗೆ ವೈದ್ಯ ಬೇಕಾಗಿಲ್ಲ, ರೋಗಿಗಳಿಗೆ ಬೇಕು.+ 13 ನೀವು ಮೊದ್ಲು ಹೋಗಿ ‘ನನಗೆ ಬಲಿ ಬೇಡ, ಜನ್ರಿಗೆ ಕರುಣೆ ತೋರಿಸಿ’+ ಅನ್ನೋ ಮಾತಿನ ಅರ್ಥ ತಿಳ್ಕೊಳ್ಳಿ. ಯಾಕಂದ್ರೆ ನಾನು ನೀತಿವಂತರನ್ನಲ್ಲ, ಪಾಪಿಗಳನ್ನ ಕರಿಯೋಕೆ ಬಂದಿದ್ದೀನಿ” ಅಂದನು.
-
-
ಮಾರ್ಕ 2:15-17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ಆಮೇಲೆ ಯೇಸು ಲೇವಿಯ ಮನೇಲಿ ಊಟಕ್ಕೆ ಕೂತಿದ್ದಾಗ ತುಂಬ ಜನ ತೆರಿಗೆ ವಸೂಲಿ ಮಾಡುವವರು, ಪಾಪಿಗಳು ಸಹ ಆತನ ಜೊತೆ, ಆತನ ಶಿಷ್ಯರ ಜೊತೆ ಊಟಕ್ಕೆ ಕೂತರು. ಯಾಕಂದ್ರೆ ಅಲ್ಲಿದ್ದ ತುಂಬ ಜನ ಯೇಸುವಿನ ಶಿಷ್ಯರಾಗಿದ್ರು.+ 16 ಆತನು ಪಾಪಿಗಳ ಮತ್ತು ತೆರಿಗೆ ವಸೂಲಿ ಮಾಡೋರ ಜೊತೆ ಊಟ ಮಾಡ್ತಿರೋದನ್ನ ಫರಿಸಾಯರು ಪಂಡಿತರು ನೋಡಿದ್ರು. ಅವರು ಯೇಸುವಿನ ಶಿಷ್ಯರಿಗೆ “ಇವನು ತೆರಿಗೆ ವಸೂಲಿ ಮಾಡುವವರ ಜೊತೆ, ಪಾಪಿಗಳ ಜೊತೆ ಯಾಕೆ ಊಟ ಮಾಡ್ತಾನೆ?” ಅಂತ ಕೇಳಿದ್ರು. 17 ಇದನ್ನ ಕೇಳಿ ಯೇಸು “ಆರೋಗ್ಯವಾಗಿ ಇರೋರಿಗೆ ವೈದ್ಯ ಬೇಕಾಗಿಲ್ಲ, ರೋಗಿಗಳಿಗೆ ಬೇಕು. ನಾನು ನೀತಿವಂತರನ್ನಲ್ಲ, ಪಾಪಿಗಳನ್ನ ಕರಿಯೋಕೆ ಬಂದಿದ್ದೀನಿ”+ ಅಂದನು.
-