-
ಮತ್ತಾಯ 13:18-23ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
18 ರೈತನ ಉದಾಹರಣೆ ಅರ್ಥ ಹೇಳ್ತೀನಿ ಕೇಳಿ.+ 19 ಯಾರಾದ್ರೂ ದೇವರ ಆಳ್ವಿಕೆಯ ಸಂದೇಶ ಕೇಳಿ ಅರ್ಥಮಾಡ್ಕೊಳ್ಳದೆ ಇದ್ರೆ ಸೈತಾನ+ ಬಂದು ಅವನ ಹೃದಯದಲ್ಲಿ ಇರೋದನ್ನ ಕಿತ್ತುಹಾಕ್ತಾನೆ. ಆ ವ್ಯಕ್ತಿನೇ ದಾರಿಯಲ್ಲಿ ಬಿದ್ದ ಬೀಜ.+ 20 ಕಲ್ಲು ನೆಲದ ತರ ಇರುವವನು ಸಂದೇಶ ಕೇಳಿದ ತಕ್ಷಣ ಖುಷಿಯಿಂದ ನಂಬ್ತಾನೆ.+ 21 ಆದ್ರೆ ಆ ಸಂದೇಶ ಹೃದಯಕ್ಕೆ ಮುಟ್ಟದ ಕಾರಣ ಸ್ವಲ್ಪ ದಿನ ಮಾತ್ರ ನಂಬಿಕೆ ಇರುತ್ತೆ. ದೇವರ ಸಂದೇಶದ ಕಾರಣ ಕಷ್ಟ ಹಿಂಸೆ ಬಂದಾಗ ನಂಬಿಕೆ ಬಿಟ್ಟುಬಿಡ್ತಾನೆ. 22 ಮುಳ್ಳುಗಿಡಗಳಲ್ಲಿ ಬಿದ್ದ ಬೀಜದ ತರ ಇರುವವನು ಸಂದೇಶ ಕೇಳಿಸ್ಕೊಳ್ತಾನೆ. ಆದ್ರೆ ಜೀವನದ ಚಿಂತೆ,+ ಹಣದಾಸೆ ಆ ಸಂದೇಶವನ್ನ ಅದುಮಿ ಫಲಕೊಡದ ಹಾಗೆ ಮಾಡುತ್ತೆ.+ 23 ಒಳ್ಳೇ ನೆಲದಲ್ಲಿ ಬಿದ್ದ ಬೀಜದ ತರ ಇರುವವನು ಸಂದೇಶ ಕೇಳಿ ಅರ್ಥಮಾಡ್ಕೊಂಡು 100ರಷ್ಟು, 60ರಷ್ಟು, 30ರಷ್ಟು ಫಲಕೊಡ್ತಾನೆ.”+
-
-
ಮಾರ್ಕ 4:14-20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ಬಿತ್ತುವವನು ಯಾರಂದ್ರೆ ದೇವರ ಸಂದೇಶವನ್ನ ಸಾರುವವನು.+ 15 ದಾರಿ ಬದಿಯಲ್ಲಿ ಬಿತ್ತಿರೋ ಬೀಜದ ತರ ಕೆಲವರು ಇರ್ತಾರೆ. ಅವರು ಸಂದೇಶ ಕೇಳ್ತಾರೆ. ಆದ್ರೆ ಸೈತಾನ ತಕ್ಷಣ ಬಂದು+ ಅವ್ರಲ್ಲಿ ಬಿತ್ತಿದ ಸಂದೇಶವನ್ನ ಕಿತ್ಕೊಂಡು ಹೋಗ್ತಾನೆ.+ 16 ಇನ್ನು ಕೆಲವರು ಕಲ್ಲು ನೆಲದ ತರ ಇರ್ತಾರೆ. ಅವರು ಸಂದೇಶ ಕೇಳಿದ ತಕ್ಷಣ ಖುಷಿಯಿಂದ ನಂಬ್ತಾರೆ.+ 17 ಆದ್ರೆ ಆ ಸಂದೇಶ ಹೃದಯಕ್ಕೆ ಮುಟ್ಟದ ಕಾರಣ ಸ್ವಲ್ಪ ದಿನ ಮಾತ್ರ ಅವ್ರಲ್ಲಿ ನಂಬಿಕೆ ಇರುತ್ತೆ. ದೇವರ ಸಂದೇಶದ ಕಾರಣ ಕಷ್ಟ, ಹಿಂಸೆ ಬಂದಾಗ ನಂಬಿಕೆ ಬಿಟ್ಟುಬಿಡ್ತಾರೆ. 18 ಇನ್ನು ಕೆಲವರು ಮುಳ್ಳುಗಿಡಗಳು ಇರೋ ನೆಲದ ತರ ಇರ್ತಾರೆ. ಅವರು ಸಂದೇಶವನ್ನ ಕೇಳಿಸ್ಕೊಳ್ತಾರೆ.+ 19 ಆದ್ರೆ ಜೀವನದ ಚಿಂತೆ,+ ಹಣದಾಸೆ,+ ಬೇರೆ ಎಲ್ಲ ಆಸೆಗಳು+ ಹೃದಯಕ್ಕೆ ಹೋಗಿ ಆ ಸಂದೇಶವನ್ನ ಅದುಮಿ ಫಲಕೊಡದ ಹಾಗೆ ಮಾಡಿಬಿಡ್ತವೆ. 20 ಕೊನೆಗೆ ಬೀಜ ಬಿದ್ದ ಒಳ್ಳೇ ನೆಲದ ಹಾಗೆ ಇರುವವರು ಸಂದೇಶವನ್ನ ಕೇಳಿ ನಂಬಿ 30ರಷ್ಟು, 60ರಷ್ಟು, 100ರಷ್ಟು ಫಲ ಕೊಡ್ತಾರೆ”+ ಅಂದನು.
-