-
ಮತ್ತಾಯ 9:23-26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
23 ಯೇಸು ಆ ಅಧಿಕಾರಿಯ ಮನೆಗೆ ಬಂದಾಗ ಜನ ಕೊಳಲಿನಿಂದ ಶೋಕಗೀತೆ ನುಡಿಸ್ತಿದ್ರು. ಇನ್ನು ಕೆಲವರು ಜೋರಾಗಿ ಅಳ್ತಿದ್ರು.+ 24 ಯೇಸು ಅವ್ರಿಗೆ “ಹೊರಗೆ ಹೋಗಿ. ಹುಡುಗಿ ಸತ್ತಿಲ್ಲ, ನಿದ್ದೆ ಮಾಡ್ತಿದ್ದಾಳೆ”+ ಅಂದನು. ಇದನ್ನ ಕೇಳಿ ಜನ ನಗ್ತಾ ಯೇಸುವನ್ನ ಗೇಲಿ ಮಾಡಿದ್ರು. 25 ಅವರು ಹೋದ ಮೇಲೆ ಯೇಸು ಒಳಗೆ ಹೋಗಿ ಆ ಹುಡುಗಿ ಕೈ ಮುಟ್ಟಿದಾಗ+ ಅವಳು ಎದ್ದಳು.+ 26 ಈ ಸುದ್ದಿ ಆ ಪ್ರದೇಶದಲ್ಲೆಲ್ಲ ಹಬ್ಬಿತು.
-
-
ಮಾರ್ಕ 5:38-43ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
38 ಅವರು ಸಭಾಮಂದಿರದ ಅಧಿಕಾರಿಯ ಮನೆಗೆ ಬಂದಾಗ ಅಲ್ಲಿ ತುಂಬ ಗದ್ದಲ ಇತ್ತು. ಜನ ಜೋರಾಗಿ ಅಳ್ತಾ ಗೋಳಾಡ್ತಾ ಇದ್ರು.+ 39 ಯೇಸು ಮನೆಯೊಳಗೆ ಹೋಗಿ “ನೀವು ಯಾಕೆ ಗದ್ದಲ ಮಾಡ್ತಿದ್ದೀರಾ? ಯಾಕೆ ಅಳ್ತಿದ್ದೀರಾ? ಹುಡುಗಿ ಸತ್ತಿಲ್ಲ, ನಿದ್ದೆ ಮಾಡ್ತಿದ್ದಾಳೆ”+ ಅಂದನು. 40 ಇದನ್ನ ಕೇಳಿ ಅವರು ಗೇಲಿ ಮಾಡಿ ನಗೋಕೆ ಶುರುಮಾಡಿದ್ರು. ಆದ್ರೆ ಯೇಸು ಅವ್ರನ್ನೆಲ್ಲ ಹೊರಗೆ ಕಳಿಸಿದನು. ಹುಡುಗಿಯ ತಂದೆತಾಯಿ ಮತ್ತು ತನ್ನ ಜೊತೆ ಇದ್ದವ್ರನ್ನ ಕರ್ಕೊಂಡು ಒಳಗೆ ಹೋದನು. ಅಲ್ಲಿ ಹುಡುಗಿ ಮಲಗಿದ್ದಳು. 41 ಯೇಸು ಅವಳ ಕೈಹಿಡಿದು “ತಾಲಿಥ ಕೂಮಿ” ಅಂದನು. ಹಾಗಂದ್ರೆ “ಪುಟ್ಟಿ, ಎದ್ದೇಳು!”+ ಅಂತ ಅರ್ಥ. 42 ತಕ್ಷಣ ಆ ಹುಡುಗಿ ಎದ್ದು ನಡಿಯೋಕೆ ಶುರುಮಾಡಿದಳು. (ಅವಳಿಗೆ 12 ವರ್ಷ.) ಇದನ್ನ ನೋಡಿ ಅವಳ ಹೆತ್ತವರು ಸಂತೋಷದಲ್ಲಿ ತೇಲಾಡಿದ್ರು. 43 ಆದ್ರೆ ಯೇಸು ಅವ್ರಿಗೆ ನಡೆದ ವಿಷ್ಯವನ್ನ ಯಾರಿಗೂ ಹೇಳಬೇಡಿ+ ಅಂತ ಪದೇಪದೇ ಅಪ್ಪಣೆ ಕೊಟ್ಟನು. ಆಮೇಲೆ ಆ ಹುಡುಗಿಗೆ ಏನಾದ್ರೂ ತಿನ್ನೋಕೆ ಕೊಡಿ ಅಂದನು.
-