-
ಮತ್ತಾಯ 12:24-30ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
24 ಫರಿಸಾಯರು ಅವ್ರ ಮಾತು ಕೇಳಿಸ್ಕೊಂಡು “ಇವನು ಕೆಟ್ಟ ದೇವದೂತರನ್ನ ಸೈತಾನನ* ಸಹಾಯದಿಂದಾನೇ ಬಿಡಿಸ್ತಾ ಇದ್ದಾನೆ”+ ಅಂದ್ರು. 25 ಅವ್ರ ಆಲೋಚನೆನ ಅರ್ಥ ಮಾಡ್ಕೊಂಡ ಯೇಸು ಹೀಗೆ ಹೇಳಿದನು “ಒಂದು ದೇಶದಲ್ಲಿ ಪ್ರಜೆಗಳೇ ಕಿತ್ತಾಡ್ತಿದ್ರೆ ಆ ದೇಶ ನಾಶವಾಗಿ ಹೋಗುತ್ತೆ. ತಮ್ಮತಮ್ಮೊಳಗೇ ಜಗಳ ಆಡೋ ಊರು, ಕುಟುಂಬ ಹಾಳಾಗಿ ಹೋಗುತ್ತೆ. 26 ಅದೇ ತರ ಸೈತಾನ ಸೈತಾನನನ್ನೇ ಬಿಡಿಸಿದ್ರೆ ಅವನು ತನ್ನ ವಿರುದ್ಧಾನೇ ತಿರುಗಿ ಬಿದ್ದ ಹಾಗೆ ಆಗುತ್ತಲ್ವಾ? ಹಾಗೆ ಮಾಡಿದ್ರೆ ಅವನ ಸಾಮ್ರಾಜ್ಯ ಒಡೆದು ಹೋಗುತ್ತೆ ತಾನೇ? 27 ನಾನು ಸೈತಾನನ ಸಹಾಯದಿಂದ ಕೆಟ್ಟ ದೇವದೂತರನ್ನ ಬಿಡಿಸ್ತಾ ಇದ್ರೆ ನಿಮ್ಮ ಶಿಷ್ಯರು ಯಾರ ಸಹಾಯದಿಂದ ಬಿಡಿಸ್ತಿದ್ದಾರೆ? ನೀವು ಮಾತಾಡ್ತಿರೋದು ತಪ್ಪು ಅಂತ ನಿಮ್ಮ ಶಿಷ್ಯರೇ ತೋರಿಸಿಕೊಡ್ತಾ ಇದ್ದಾರೆ. 28 ನಾನು ಕೆಟ್ಟ ದೇವದೂತರನ್ನ ಬಿಡಿಸೋದು ದೇವರ ಪವಿತ್ರಶಕ್ತಿಯಿಂದ ಆಗಿದ್ರೆ ಅದರರ್ಥ ದೇವರ ಆಳ್ವಿಕೆ ಈಗಾಗಲೇ ಬಂದಿದೆ, ಆದ್ರೆ ನೀವು ಅದನ್ನ ಗಮನಿಸಲಿಲ್ಲ.+ 29 ಒಬ್ಬ ಬಲಶಾಲಿಯ ಮನೆಗೆ ನುಗ್ಗಿ ಅವನ ಕೈಕಾಲು ಕಟ್ಟಿಹಾಕದೆ ಆಸ್ತಿ ದೋಚೋಕಾಗುತ್ತಾ? ಅವನನ್ನ ಕಟ್ಟಿಹಾಕಿದ ಮೇಲೆನೇ ಮನೆ ದೋಚಕ್ಕೆ ಆಗೋದು. 30 ನನ್ನ ಪರವಾಗಿ ನಿಲ್ಲದವನು ನನ್ನ ವಿರೋಧಿ. ನನ್ನ ಹತ್ರ ಬರೋಕೆ ಜನ್ರಿಗೆ ಸಹಾಯ ಮಾಡದವನು ಅವ್ರನ್ನ ನನ್ನಿಂದ ದೂರ ಓಡಿಸ್ತಿದ್ದಾನೆ.+
-
-
ಮಾರ್ಕ 3:22-27ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ಅಷ್ಟೇ ಅಲ್ಲ ಯೆರೂಸಲೇಮಿಂದ ಬಂದಿದ್ದ ಪಂಡಿತರು “ಇವನು ಸೈತಾನನ* ಸಹಾಯದಿಂದನೇ ಕೆಟ್ಟ ದೇವದೂತರನ್ನ ಬಿಡಿಸ್ತಾ ಇದ್ದಾನೆ”+ ಅಂತ ಹೇಳ್ತಾ ಇದ್ರು. 23 ಅದಕ್ಕೆ ಯೇಸು ಉದಾಹರಣೆಗಳನ್ನ ಬಳಸಿ ಅವ್ರ ಹತ್ರ ಮಾತಾಡೋಕೆ ಶುರುಮಾಡಿದನು. “ಸೈತಾನ ಸೈತಾನನನ್ನೇ ಹೇಗೆ ಬಿಡಿಸ್ತಾನೆ? 24 ಒಂದು ದೇಶದಲ್ಲಿ ಪ್ರಜೆಗಳೇ ಕಿತ್ತಾಡ್ತಾ ಇದ್ರೆ ಆ ದೇಶ ನಾಶ ಆಗುತ್ತೆ.+ 25 ತಮ್ಮತಮ್ಮೊಳಗೇ ಜಗಳ ಮಾಡೋ ಊರು, ಕುಟುಂಬ ಹಾಳಾಗಿ ಹೋಗುತ್ತೆ. 26 ಅದೇ ತರ ಸೈತಾನ ಸೈತಾನನನ್ನೇ ಬಿಡಿಸಿದ್ರೆ ಅವನು ತನ್ನ ವಿರುದ್ಧಾನೇ ತಿರುಗಿ ಬಿದ್ದಂಗೆ ಆಗುತ್ತಲ್ವಾ? ಹಾಗೆ ಮಾಡಿದ್ರೆ ಅವನ ಸಾಮ್ರಾಜ್ಯ ಒಡೆದು ಹೋಗುತ್ತೆ ತಾನೇ? 27 ಒಬ್ಬ ಬಲಶಾಲಿಯ ಮನೆಗೆ ನುಗ್ಗಿ ಅವನ ಕೈಕಾಲು ಕಟ್ಟಿಹಾಕದೆ ಆಸ್ತಿ ದೋಚೋಕಾಗುತ್ತಾ? ಅವನನ್ನ ಕಟ್ಟಿಹಾಕಿದ ಮೇಲೆನೇ ಮನೆ ದೋಚಕ್ಕೆ ಆಗೋದು.
-