27 ಕಪಟ ಪಂಡಿತರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ!+ ನೀವು ಸುಣ್ಣ ಹಚ್ಚಿರೋ ಸಮಾಧಿ+ ತರ ಇದ್ದೀರ. ಅದು ಹೊರಗೆ ತುಂಬ ಸುಂದರವಾಗಿ ಕಾಣುತ್ತೆ. ಆದ್ರೆ ಒಳಗೆ ಸತ್ತ ಮನುಷ್ಯನ ಎಲುಬಿಂದ, ಎಲ್ಲ ತರದ ಗಲೀಜಿಂದ ತುಂಬಿರುತ್ತೆ. 28 ಅದೇ ತರ ನೀವು ಸಹ ಹೊರಗೆ ನೀತಿವಂತರ ಹಾಗೆ ಕಾಣ್ತೀರ. ಆದ್ರೆ ನಿಮ್ಮೊಳಗೆ ಕಪಟತನ, ಅನ್ಯಾಯ ತುಂಬಿಕೊಂಡಿದೆ.+