-
ಮತ್ತಾಯ 22:15-22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ಆಮೇಲೆ ಫರಿಸಾಯರು ಯೇಸುವಿನ ಮಾತಲ್ಲಿ ತಪ್ಪು ಹುಡುಕೋಕೆ ಪಿತೂರಿ ಮಾಡಿದ್ರು.+ 16 ಅವರು ತಮ್ಮ ಶಿಷ್ಯರನ್ನ ಮತ್ತು ಹೆರೋದನ ಹಿಂಬಾಲಕರನ್ನ+ ಆತನ ಹತ್ರ ಕಳ್ಸಿದ್ರು. ಅವರು ಯೇಸುಗೆ “ಗುರು, ನಮಗೆ ಗೊತ್ತು, ನೀನು ಯಾವಾಗ್ಲೂ ಸತ್ಯನೇ ಹೇಳ್ತೀಯ, ದೇವರ ಮಾರ್ಗದ ಬಗ್ಗೆ ಸತ್ಯನೇ ಕಲಿಸ್ತೀಯ. ನೀನು ಜನ್ರನ್ನ ಮೆಚ್ಚಿಸೋಕೆ ಪ್ರಯತ್ನ ಮಾಡಲ್ಲ. ಯಾಕಂದ್ರೆ ನೀನು ಮನುಷ್ಯರ ಸ್ಥಾನಮಾನ ನೋಡಲ್ಲ. 17 ಅದಕ್ಕೇ ನಿನಗೆ ಕೇಳ್ತಿದ್ದೀವಿ. ರಾಜನಿಗೆ ತೆರಿಗೆ ಕೊಡೋದು ಸರಿನಾ? ನಿನ್ನ ಅಭಿಪ್ರಾಯ ಏನು?” ಅಂತ ಕೇಳಿದ್ರು. 18 ಅವ್ರ ಕುತಂತ್ರದ ಬಗ್ಗೆ ಯೇಸುಗೆ ಗೊತ್ತಿತ್ತು. ಹಾಗಾಗಿ “ಕಪಟಿಗಳೇ, ನೀವು ಯಾಕೆ ನನ್ನನ್ನ ಪರೀಕ್ಷಿಸ್ತೀರಾ? 19 ತೆರಿಗೆ ಕಟ್ಟೋ ಆ ನಾಣ್ಯ ತೋರಿಸಿ” ಅಂದನು. ಅವರು ಒಂದು ದಿನಾರು ನಾಣ್ಯ ಕೊಟ್ರು. 20 ಆಗ ಯೇಸು “ಇದ್ರ ಮೇಲಿರೋ ಚಿತ್ರ, ಹೆಸ್ರು ಯಾರ್ದು?” ಅಂತ ಕೇಳಿದನು. 21 ಅವರು “ರಾಜಂದು” ಅಂದ್ರು. ಆಗ ಯೇಸು “ಹಾಗಾದ್ರೆ ರಾಜಂದು ರಾಜನಿಗೆ ಕೊಡಿ, ದೇವರದ್ದು ದೇವ್ರಿಗೆ ಕೊಡಿ”+ ಅಂದ. 22 ಇದನ್ನ ಕೇಳಿ ಅವ್ರಿಗೆ ಆಶ್ಚರ್ಯ ಆಯ್ತು. ಅವರು ಯೇಸುನ ಬಿಟ್ಟುಹೋದ್ರು.
-
-
ಮಾರ್ಕ 12:13-17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ಆಮೇಲೆ ಅವರು ಯೇಸುವಿನ ಮಾತಲ್ಲಿ ತಪ್ಪು ಹುಡುಕೋಕೆ ಫರಿಸಾಯರನ್ನ ಮತ್ತು ಹೆರೋದನ ಹಿಂಬಾಲಕರನ್ನ ಯೇಸು ಹತ್ರ ಕಳಿಸಿದ್ರು.+ 14 ಅವರು ಬಂದು “ಗುರು, ನಮಗೆ ಗೊತ್ತು, ನೀನು ಯಾವಾಗ್ಲೂ ಸತ್ಯನೇ ಹೇಳ್ತೀಯ, ದೇವರ ಮಾರ್ಗದ ಬಗ್ಗೆ ಸತ್ಯವನ್ನೇ ಕಲಿಸ್ತೀಯ. ನೀನು ಜನ್ರನ್ನ ಮೆಚ್ಚಿಸೋಕೆ ಪ್ರಯತ್ನ ಮಾಡಲ್ಲ. ಯಾಕಂದ್ರೆ ನೀನು ಮನುಷ್ಯರ ಸ್ಥಾನಮಾನ ನೋಡಲ್ಲ. ಆದ್ರೆ ಒಂದು ವಿಷ್ಯ ನಮಗೆ ಹೇಳು, ರಾಜನಿಗೆ ತೆರಿಗೆ ಕೊಡೋದು ಸರಿನಾ?* 15 ನಾವು ಕೊಡಬೇಕಾ? ಬೇಡ್ವಾ?” ಅಂತ ಕೇಳಿದ್ರು. ಅವ್ರ ಸಂಚನ್ನ ತಿಳಿದ ಯೇಸು “ನೀವ್ಯಾಕೆ ನನ್ನನ್ನ ಪರೀಕ್ಷಿಸ್ತೀರಾ? ಒಂದು ದಿನಾರು* ನಾಣ್ಯ ಕೊಡಿ” ಅಂದನು. 16 ಅವರು ಒಂದು ನಾಣ್ಯ ಕೊಟ್ರು. ಆಗ ಯೇಸು “ಇದ್ರ ಮೇಲಿರೋ ಚಿತ್ರ, ಹೆಸ್ರು ಯಾರದು?” ಅಂತ ಕೇಳಿದನು. ಅವರು “ರಾಜಂದು” ಅಂದ್ರು. 17 “ಹಾಗಾದ್ರೆ ರಾಜಂದು ರಾಜನಿಗೆ ಕೊಡಿ,+ ಆದ್ರೆ ದೇವರದ್ದು ದೇವರಿಗೆ ಕೊಡಿ”+ ಅಂದನು ಯೇಸು. ಆತನ ಮಾತನ್ನ ಕೇಳಿ ಅವರು ಬೆಚ್ಚಿಬೆರಗಾದ್ರು.
-