-
ಮಾರ್ಕ 14:13-16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ಆಗ ಆತನು ಇಬ್ರು ಶಿಷ್ಯರಿಗೆ “ನೀವು ಪಟ್ಟಣಕ್ಕೆ ಹೋಗಿ. ಅಲ್ಲಿ ಮಡಿಕೆಯಲ್ಲಿ ನೀರು ಹೊತ್ಕೊಂಡು ಹೋಗ್ತಿರೋ ಒಬ್ಬ ವ್ಯಕ್ತಿ ಸಿಗ್ತಾನೆ. ಅವನ ಹಿಂದೆ ಹೋಗಿ.+ 14 ಅವನು ಯಾವ ಮನೆಯೊಳಗೆ ಹೋಗ್ತಾನೋ ಆ ಮನೆ ಯಜಮಾನನಿಗೆ ‘ನಮ್ಮ ಗುರು ನಿನ್ನ ಮನೇಲಿ ಶಿಷ್ಯರ ಜೊತೆ ಪಸ್ಕ ಹಬ್ಬ ಮಾಡಬೇಕು, ಆ ಕೋಣೆ ಎಲ್ಲಿದೆ? ಅಂತ ಕೇಳ್ತಿದ್ದಾನೆ’ ಅನ್ನಿ. 15 ಆಗ ಅವನು ಮಾಳಿಗೆ ಮೇಲೆ ಇರೋ ದೊಡ್ಡ ಕೋಣೆ ತೋರಿಸ್ತಾನೆ. ನಮಗೆ ಬೇಕಾಗಿರೋ ಎಲ್ಲ ವಸ್ತುಗಳೂ ಅಲ್ಲಿರುತ್ತೆ. ಅಲ್ಲಿ ಪಸ್ಕ ಹಬ್ಬದ ಊಟ ತಯಾರಿ ಮಾಡಿ” ಅಂತ ಹೇಳಿ ಕಳಿಸಿದನು. 16 ಶಿಷ್ಯರು ಪಟ್ಟಣಕ್ಕೆ ಹೋದ್ರು. ಯೇಸು ಹೇಳಿದ ಹಾಗೇ ಆಯ್ತು. ಪಸ್ಕ ಹಬ್ಬಕ್ಕೆ ಎಲ್ಲ ಸಿದ್ಧತೆ ಮಾಡಿದ್ರು.
-