18 ನಾನು ಅವ್ರ ಸಹೋದರರಿಂದಾನೇ ನಿನ್ನಂಥ ಒಬ್ಬ ಪ್ರವಾದಿನ ಅವ್ರಿಗಾಗಿ ನೇಮಿಸ್ತೀನಿ.+ ನನ್ನ ಮಾತುಗಳನ್ನ ಅವನಿಗೆ ಹೇಳ್ತೀನಿ,+ ನಾನು ಹೇಳೋ ಎಲ್ಲ ಆಜ್ಞೆಗಳನ್ನ ಅವನು ಅವ್ರಿಗೆ ಹೇಳ್ತಾನೆ.+
15 ಸತ್ತಿದ್ದವನು ಎದ್ದು ಕೂತು ಮಾತಾಡೋಕೆ ಶುರುಮಾಡಿದ. ಯೇಸು ಅವನನ್ನ ತಾಯಿಗೆ ಒಪ್ಪಿಸಿದನು.+16 ಎಲ್ರಿಗೂ ತುಂಬ ಭಯ ಆಯ್ತು. ಅವರು “ಒಬ್ಬ ದೊಡ್ಡ ಪ್ರವಾದಿ ನಮ್ಮ ಹತ್ರ ಬಂದಿದ್ದಾನೆ,”+ “ದೇವರು ತನ್ನ ಜನ್ರನ್ನ ನೆನಪಿಸ್ಕೊಳ್ತಿದ್ದಾನೆ”+ ಅಂತ ದೇವರನ್ನ ಹೊಗಳಿದ್ರು.
2 ಅವನು ರಾತ್ರಿ ಹೊತ್ತಲ್ಲಿ+ ಯೇಸು ಹತ್ರ ಬಂದು “ರಬ್ಬೀ,+ ನೀನು ದೇವರಿಂದ ಬಂದಿರೋ ಒಬ್ಬ ಗುರು ಅಂತ ನಂಗೊತ್ತು. ಯಾಕಂದ್ರೆ ನೀನು ಮಾಡ್ತಿರೋ ಅದ್ಭುತಗಳನ್ನ+ ದೇವರ ಸಹಾಯ ಇಲ್ಲದೆ ಯಾವ ಮನುಷ್ಯನಿಗೂ ಮಾಡೋಕಾಗಲ್ಲ” ಅಂದನು.+
22 ಇಸ್ರಾಯೇಲ್ಯರೇ ಕೇಳಿ, ದೇವರು ನಜರೇತಿನ ಯೇಸು ಮೂಲಕ ನಿಮ್ಮ ಮುಂದೆ ಅದ್ಭುತಗಳನ್ನ, ಆಶ್ಚರ್ಯ ಹುಟ್ಟಿಸೋ ವಿಷ್ಯಗಳನ್ನ ಮಾಡಿ ಯೇಸುವನ್ನ ತಾನೇ ಕಳಿಸಿದ್ದು ಅಂತ ತೋರಿಸ್ಕೊಟ್ಟನು.+ ಈ ವಿಷ್ಯ ನಿಮಗೆ ಚೆನ್ನಾಗಿ ಗೊತ್ತು.