-
ಮತ್ತಾಯ 14:24-33ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
24 ಅಷ್ಟೊತ್ತಿಗಾಗಲೇ ಶಿಷ್ಯರು ದೋಣಿಯಲ್ಲಿ ದಡದಿಂದ ತುಂಬ ದೂರ ಹೋಗಿದ್ರು.* ಜೋರಾಗಿ ಗಾಳಿ ಬೀಸ್ತಾ ಇತ್ತು. ದೊಡ್ಡ ದೊಡ್ಡ ಅಲೆ ದೋಣಿಗೆ ಬಡಿತಾ ಇತ್ತು. 25 ನಸುಕಲ್ಲಿ* ಯೇಸು ಸಮುದ್ರದ ನೀರಿನ ಮೇಲೆ ನಡಿತಾ ಶಿಷ್ಯರ ಹತ್ರ ಬಂದನು. 26 ನೀರಿನ ಮೇಲೆ ನಡಿತಿರೋದು ಯಾರು ಅಂತ ಗೊತ್ತಾಗದೆ ಶಿಷ್ಯರು ಭಯಪಟ್ಟು “ಅಯ್ಯೋ ಅಲ್ಲಿ ಏನೋ ಇದೆ” ಅಂತ ಚೀರಿದ್ರು. 27 ತಕ್ಷಣ ಯೇಸು ಅವ್ರಿಗೆ “ನಾನೇ, ಭಯಪಡಬೇಡಿ” ಅಂದನು.+ 28 ಆಗ ಪೇತ್ರ “ಸ್ವಾಮಿ, ಅದು ನೀನೇ ಆಗಿದ್ರೆ ನೀರಿನ ಮೇಲೆ ನಡ್ಕೊಂಡು ನಿನ್ನ ಹತ್ರ ಬರೋಕೆ ನಂಗೆ ಅಪ್ಪಣೆಕೊಡು” ಅಂದ. 29 ಯೇಸು “ಬಾ” ಅಂದಾಗ ಪೇತ್ರ ದೋಣಿ ಇಳಿದು ನೀರಿನ ಮೇಲೆ ನಡಿತಾ ಯೇಸು ಕಡೆ ಹೋದ. 30 ಆದ್ರೆ ಬಿರುಗಾಳಿ ನೋಡಿ ಪೇತ್ರನಿಗೆ ಭಯ ಆಗಿ ನೀರಲ್ಲಿ ಮುಳುಗ್ತಾ “ಸ್ವಾಮಿ ನನ್ನನ್ನ ಕಾಪಾಡು” ಅಂತ ಚೀರಿದ. 31 ತಕ್ಷಣ ಯೇಸು ಕೈಚಾಚಿ ಅವನನ್ನ ಹಿಡಿದು “ನಂಬಿಕೆ ಕೊರತೆ ಇರುವವನೇ, ಯಾಕೆ ಸಂಶಯಪಟ್ಟೆ?” ಅಂತ ಕೇಳಿದನು.+ 32 ಅವರಿಬ್ರು ದೋಣಿ ಹತ್ತಿದಾಗ ಬಿರುಗಾಳಿ ನಿಂತುಹೋಯ್ತು. 33 ಆಗ ದೋಣಿಯಲ್ಲಿ ಇದ್ದವರು “ನೀನು ನಿಜವಾಗ್ಲೂ ದೇವರ ಮಗ” ಅಂತ ಹೇಳ್ತಾ ಬಗ್ಗಿ ನಮಸ್ಕರಿಸಿದ್ರು.
-