ಜ್ಞಾನೋಕ್ತಿ 11:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಧಾರಾಳವಾಗಿ ಕೊಡುವವನಿಗೆ* ಧಾರಾಳವಾಗಿ ಸಿಗುತ್ತೆ,+ಕೊಡಬೇಕಾಗಿರೋದನ್ನ ಕೊಡದ ಜಿಪುಣ ಬಡವನಾಗ್ತಾನೆ.+ ಜ್ಞಾನೋಕ್ತಿ 19:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಬಡವರಿಗೆ ದಯೆ ತೋರಿಸುವವನು ಯೆಹೋವನಿಗೆ ಸಾಲ ಕೊಡ್ತಾನೆ,+ದೇವರೇ ಅವನಿಗೆ ಪ್ರತಿಫಲ ಕೊಡ್ತಾನೆ.*+ ಜ್ಞಾನೋಕ್ತಿ 22:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಉದಾರವಾಗಿ ಕೊಡುವವನಿಗೆ* ಆಶೀರ್ವಾದ ಸಿಗುತ್ತೆ,ಯಾಕಂದ್ರೆ ಅವನು ಬಡವರ ಜೊತೆ ತನ್ನ ಊಟ ಹಂಚ್ಕೊಳ್ತಾನೆ.+ ಪ್ರಸಂಗಿ 11:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ನಿನ್ನ ರೊಟ್ಟಿಯನ್ನ ನೀರಿನ ಮೇಲೆ ಎಸಿ,+ ತುಂಬ ದಿನಗಳಾದ ಮೇಲೆ ಅದು ನಿನಗೆ ಮತ್ತೆ ಸಿಗುತ್ತೆ.+ ಲೂಕ 6:38 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 38 ಕೊಡೋದನ್ನ ರೂಢಿ ಮಾಡ್ಕೊಳ್ಳಿ, ಆಗ ಜನ ನಿಮಗೆ ಕೊಡ್ತಾರೆ.+ ಅವರು ಚೆನ್ನಾಗಿ ಅಳೆದು, ಒತ್ತಿ, ಅಲ್ಲಾಡಿಸಿ, ತುಂಬಿತುಳುಕ್ತಾ ಇರುವಾಗ ನಿಮ್ಮ ಮಡಿಲಿಗೆ ಹಾಕ್ತಾರೆ. ಯಾಕಂದ್ರೆ ನೀವು ಜನ್ರ ಹತ್ರ ಹೇಗೆ ನಡಿತಿರೋ ಅವರೂ ನಿಮ್ಮ ಹತ್ರ ಅದೇ ರೀತಿ ನಡ್ಕೊಳ್ತಾರೆ.”
38 ಕೊಡೋದನ್ನ ರೂಢಿ ಮಾಡ್ಕೊಳ್ಳಿ, ಆಗ ಜನ ನಿಮಗೆ ಕೊಡ್ತಾರೆ.+ ಅವರು ಚೆನ್ನಾಗಿ ಅಳೆದು, ಒತ್ತಿ, ಅಲ್ಲಾಡಿಸಿ, ತುಂಬಿತುಳುಕ್ತಾ ಇರುವಾಗ ನಿಮ್ಮ ಮಡಿಲಿಗೆ ಹಾಕ್ತಾರೆ. ಯಾಕಂದ್ರೆ ನೀವು ಜನ್ರ ಹತ್ರ ಹೇಗೆ ನಡಿತಿರೋ ಅವರೂ ನಿಮ್ಮ ಹತ್ರ ಅದೇ ರೀತಿ ನಡ್ಕೊಳ್ತಾರೆ.”