28 ಅವನು ಅವ್ರಿಗೆ “ಯೆಹೂದ್ಯರ ನಿಯಮದ ಪ್ರಕಾರ ಒಬ್ಬ ಯೆಹೂದ್ಯ ಬೇರೆ ಜಾತಿಯ ವ್ಯಕ್ತಿಯ ಜೊತೆ ಸಹವಾಸ ಮಾಡೋದು, ಅವನನ್ನ ಭೇಟಿ ಮಾಡೋದು ತಪ್ಪು ಅಂತ ನಿಮಗೆ ಗೊತ್ತು.+ ಆದ್ರೂ ನಾನು ಯಾವ ಮನುಷ್ಯನನ್ನೂ ಅಪವಿತ್ರ ಅಂತಾಗಲಿ ಕೆಟ್ಟವನು ಅಂತಾಗಲಿ ಹೇಳಬಾರದು ಅಂತ ದೇವರು ನನಗೆ ತೋರಿಸಿದ್ದಾನೆ.+
2 ಹಾಗಾಗಿ ಪೇತ್ರ ಯೆರೂಸಲೇಮಿಗೆ ಬಂದಾಗ ಬೇರೆ ಜಾತಿಯ ಜನ್ರೂ ಸುನ್ನತಿ ಮಾಡಿಸ್ಕೊಳ್ಳಬೇಕು+ ಅಂತ ಹಠಮಾಡ್ತಿದ್ದ ಜನ ಅವನ ಜೊತೆ ಜಗಳ ಮಾಡೋಕೆ ಶುರುಮಾಡಿದ್ರು. 3 ಅವರು ಪೇತ್ರನಿಗೆ ‘ನೀನು ಸುನ್ನತಿಯಾಗದ ಜನ್ರ ಮನೆಗೆ ಹೋದೆ. ಅಷ್ಟೇ ಅಲ್ಲ ಅವ್ರ ಜೊತೆ ಊಟನೂ ಮಾಡಿದ್ದೀಯ. ಯಾಕೆ ನೀನು ಆ ತರ ಮಾಡಿದೆ?’ ಅಂತ ಕೇಳಿದ್ರು.