28 ನೀವು ನಿಮ್ಮ ಬಗ್ಗೆ ಜಾಗ್ರತೆ ವಹಿಸಿ.+ ಇಡೀ ಸಭೆನ ಚೆನ್ನಾಗಿ ನೋಡ್ಕೊಳ್ಳಿ. ಯಾಕಂದ್ರೆ ದೇವ್ರ ಸಭೆನ ಕಾಯೋಕ್ಕೋಸ್ಕರ+ ಪವಿತ್ರಶಕ್ತಿ ನಿಮ್ಮನ್ನ ಮೇಲ್ವಿಚಾರಕರನ್ನಾಗಿ+ ನೇಮಿಸಿದೆ. ಅಷ್ಟೇ ಅಲ್ಲ ದೇವರು ಆ ಸಭೆನ ತನ್ನ ಸ್ವಂತ ಮಗನ ರಕ್ತದಿಂದ ಕೊಂಡ್ಕೊಂಡಿದ್ದಾನೆ.+
25 ಕ್ರಿಸ್ತನ ರಕ್ತದಲ್ಲಿ+ ನಂಬಿಕೆ ಇಟ್ಟು ಮನುಷ್ಯರು ತನ್ನ ಜೊತೆ ಸಮಾಧಾನ ಮಾಡ್ಕೊಬೇಕು ಅಂತ ದೇವರು ಕ್ರಿಸ್ತನನ್ನ ಪ್ರಾಯಶ್ಚಿತ್ತ ಬಲಿಯಾಗಿ ಕೊಟ್ಟನು.+ ದೇವರು ತನ್ನ ನೀತಿಯನ್ನ ತೋರಿಸೋಕೆ ಈ ಏರ್ಪಾಡು ಮಾಡಿದನು. ಯಾಕಂದ್ರೆ ಹಿಂದಿನ ಕಾಲದಲ್ಲಿ ಆತನು ತಾಳ್ಮೆ* ತೋರಿಸ್ತಾ ಜನ ಮಾಡಿದ ಪಾಪಗಳನ್ನ ಕ್ಷಮಿಸ್ತಿದ್ದನು.
9 ಅವರು ಒಂದು ಹೊಸ ಹಾಡನ್ನ+ ಹಾಡಿದ್ರು: “ಪುಸ್ತಕದ ಸುರುಳಿಯನ್ನ ತಗೊಂಡು ಅದ್ರ ಮುದ್ರೆಗಳನ್ನ ತೆಗಿಯೋಕೆ ನಿನಗೆ ಯೋಗ್ಯತೆ ಇದೆ. ಯಾಕಂದ್ರೆ ನೀನು ನಿನ್ನನ್ನೇ ಬಲಿ ಕೊಟ್ಟೆ. ನಿನ್ನ ರಕ್ತದಿಂದ ಎಲ್ಲ ಭಾಷೆ, ಜಾತಿ, ದೇಶದಿಂದ ದೇವರಿಗೋಸ್ಕರ+ ಜನ್ರನ್ನ ಕೊಂಡ್ಕೊಂಡೆ.+