16 ಆಮೇಲೆ ಪೌಲ ದೆರ್ಬೆಗೆ ಬಂದ. ಅಲ್ಲಿಂದ ಲುಸ್ತ್ರಕ್ಕೆ+ ಹೋದ. ಅಲ್ಲಿ ತಿಮೊತಿ+ ಅನ್ನೋ ಒಬ್ಬ ಶಿಷ್ಯನಿದ್ದ. ಯೆಹೂದ್ಯಳಾಗಿದ್ದ ಅವನ ಅಮ್ಮ ಕ್ರಿಸ್ತನಲ್ಲಿ ನಂಬಿಕೆ ಇಟ್ಟಿದ್ದಳು. ಆದ್ರೆ ಅವನ ಅಪ್ಪ ಒಬ್ಬ ಗ್ರೀಕನಾಗಿದ್ದ. 2 ತಿಮೊತಿ ಲುಸ್ತ್ರ ಮತ್ತು ಇಕೋನ್ಯದಲ್ಲಿದ್ದ ಸಹೋದರರ ಹತ್ರ ಒಳ್ಳೇ ಹೆಸ್ರು ಪಡ್ಕೊಂಡಿದ್ದ.