10 ಆರೋನ ವರ್ಷಕ್ಕೆ ಒಮ್ಮೆ ಧೂಪವೇದಿಯನ್ನ ಪರಿಶುದ್ಧ ಮಾಡಬೇಕು.+ ಅವನು ಪಾಪಪರಿಹಾರಕ ಬಲಿಯಾಗಿ ಅರ್ಪಿಸಲಾದ ಪ್ರಾಣಿಯ ರಕ್ತದಲ್ಲಿ ಸ್ವಲ್ಪ ತಗೊಂಡು ಧೂಪವೇದಿಯ ಕೊಂಬುಗಳಿಗೆ ಹಾಕೋ ಮೂಲಕ ಅದನ್ನ ಪರಿಶುದ್ಧ ಮಾಡಬೇಕು.+ ಇದನ್ನ ತಲೆಮಾರುಗಳ ತನಕ ಮಾಡಬೇಕು. ಈ ಧೂಪವೇದಿ ಯೆಹೋವನಿಗೆ ಅತಿ ಪವಿತ್ರ.”
14 ಅವನು ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನ+ ತನ್ನ ಬೆರಳಿಂದ ತಗೊಂಡು ಮಂಜೂಷದ ಮುಚ್ಚಳದ ಮುಂದೆ ಪೂರ್ವದ ಕಡೆಗೆ ಚಿಮಿಕಿಸಬೇಕು. ಸ್ವಲ್ಪ ರಕ್ತವನ್ನ ಮಂಜೂಷದ ಮುಚ್ಚಳದ ಮುಂದೆ ಬೆರಳಿಂದ ಏಳು ಸಲ ಚಿಮಿಕಿಸಬೇಕು.+